alex Certify
ಕನ್ನಡ ದುನಿಯಾ       Mobile App
       

Kannada Duniya

‘ಸ್ನೇಕ್ ಬಾಯ್’ ಆದಿತ್ಯ ಕುಮಾರ್

snakeboy8

ಮಹಾರಾಷ್ಟ್ರದ ರತ್ನಗಿರಿಯ ನಿವಾಸಿ ಆದಿತ್ಯ ಕುಮಾರ್ ನನ್ನು ಎಲ್ಲರೂ ‘ಸ್ನೇಕ್ ಬಾಯ್’ ಎಂದೇ ಕರೆಯುತ್ತಾರೆ. ಹಾಗಂತ ಇವನೇನು ಹಾವನ್ನು ಸಾಕಿಲ್ಲ ಅಥವಾ ಹಾವುಗಳ ಜೊತೆ ಸರಸವಾಡಿಲ್ಲ. ಇದಕ್ಕೆ ಕಾರಣ ಇವನ ದೇಹದ ಭಂಗಿ.

ಆದಿತ್ಯ ಕುಮಾರ್ ತನ್ನ ದೇಹವನ್ನು ಹೇಗೆ ಬೇಕಾದರು ಬಾಗಿಸುತ್ತಾನೆ. ಹಾವಿನ ತರ ತಲೆಯನ್ನು ದೇಹದ ಒಳಗೆ ನುಗ್ಗಿಸುತ್ತಾನೆ. ಇದನ್ನೆಲ್ಲ ಮಾಡಲು ಇವನು ಯಾವುದೇ ಯೋಗ ತರಬೇತಿ ಪಡೆದುಕೊಂಡಿಲ್ಲ. ಕಳೆದ ಎಂಟು ವರ್ಷದಿಂದ ಇವನು ತನ್ನ ದೇಹವನ್ನು ವಿವಿಧ ರೀತಿ ದಂಡಿಸುತ್ತಿದ್ದಾನೆ. ಹಲವಾರು ಭಂಗಿಗಳ ಅಭ್ಯಾಸ ಮಾಡಿದ್ದಾನೆ.

ಆದಿತ್ಯ, ತನ್ನ ಗುರು ಮಂಗೇಶ್ ಕೊಪ್ಪಿಕರ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡುತ್ತಿದ್ದಾನೆ. ಇವನ ಸತತ ಪರಿಶ್ರಮದಿಂದ ಆದಿತ್ಯ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

“ತನ್ನಲ್ಲಿ 20-30 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಆದಿತ್ಯನಷ್ಟು ಬಳುಕುವ ಶರೀರವನ್ನು ಮತ್ಯಾರೂ ಹೊಂದಿಲ್ಲ” ಎನ್ನುತ್ತಾರೆ ಮಂಗೇಶ್ ಕೊಪ್ಪಿಕರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...