alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷಕಾರಿ ಹಾವಿನ ತಲೆ ಕಚ್ಚಿದ ರೈತ…!

ಉತ್ತರ ಪ್ರದೇಶದ ಹಾರ್ಡೊಯ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಹಾವು ಕಚ್ಚಲು ಬರ್ತಿದ್ದಂತೆ ಕೋಪಗೊಂಡ ರೈತನೊಬ್ಬ ಹಾವಿನ ತಲೆಯನ್ನು ಕಚ್ಚಿದ್ದಾನೆ. ಘಟನೆಯಲ್ಲಿ ಹಾವು ಸಾವನ್ನಪ್ಪಿದೆ. ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಮಾದೌಂಗಜ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೈತ ಸೋನೆಲಾಲ್ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವೊಂದು ಆತನಿಗೆ ಕಚ್ಚಿದೆ. ಇದಕ್ಕೆ ಹೆದರದ ರೈತ ಕೋಪಗೊಂಡು ಹಾವಿಗೆ ಕಚ್ಚಿದ್ದಾನೆ. ರೈತ ಹಾವಿನ ತಲೆಗೆ ಕಚ್ಚುತ್ತಿದ್ದಂತೆ ಹಾವು ಸಾವನ್ನಪ್ಪಿದೆ. ಸ್ಥಳೀಯರ ಒತ್ತಾಯದ ಮೇರೆಗೆ ರೈತ ಆಸ್ಪತ್ರೆಗೆ ದಾಖಲಾಗಿದ್ದ.

ರಾತ್ರಿ ಸೋನೆಲಾಲ್ ಗೆ ಇಂಜೆಕ್ಷನ್ ನೀಡಲಾಗಿತ್ತು. ನಂತ್ರ ಸೋನೆಲಾಲ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂತು. ಆತ ಆರೋಗ್ಯವಾಗಿದ್ದಾನೆಂದು ವೈದ್ಯರು ಹೇಳಿದ್ದಾರೆ. ಸೋನೆಲಾಲ್ ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹಾಗಾಗಿ ಆತನಿಗೆ ವಿಷ ಏರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...