alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಧರ ಗುಂಡಿಗೆ ಬಲಿಯಾದ ಹೆರಾಯಿನ್ ಸ್ಮಗ್ಲರ್ಸ್

smugler

ಕಳ್ಳ ಮಾರ್ಗಗಳ ಮೂಲಕ ಭಾರತಕ್ಕೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುವ ದೊಡ್ಡ ಜಾಲವೇ ಇದೆ. ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತದೆ. ಇಂತಹ ಹಲವು ಪ್ರಕರಣಗಳು ಪತ್ತೆಯಾಗಿವೆ.

ಇದೀಗ ಪಂಜಾಬ್ ರಾಜ್ಯದ ಖೆಮ್ ಕರಣ್ ಸಮೀಪ ಪಾಕಿಸ್ತಾನ ಗಡಿಯಲ್ಲಿ ಅಕ್ರಮವಾಗಿ ಹೆರಾಯಿನ್ ಸಾಗಿಸುತ್ತಿದ್ದ ನಾಲ್ವರನ್ನು ಗಡಿಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಗಡಿಯಂಚಿನಿಂದ ಅಕ್ರಮವಾಗಿ ಹೆರಾಯಿನ್ ಸಾಗಿಸುತ್ತಿರುವ ಮಾಹಿತಿ ಪಡೆದ ಬಿಎಸ್ಎಫ್ ಯೋಧರು ನಾಲ್ವರಿಗೆ ಶರಣಾಗಲು ಸೂಚಿಸಿದ್ದು, ಅವರು ನಿರಾಕರಿಸಿ, ಪ್ರತಿರೋಧ ಒಡ್ಡಿದ್ದರಿಂದ ನಾಲ್ವರನ್ನೂ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹತ್ಯೆಯಾದ ನಾಲ್ವರೂ ಅಂತರರಾಷ್ಟ್ರೀಯ ಸ್ಮಗ್ಲರ್ ಗಳಾಗಿದ್ದು, 10 ಕೆಜಿ ಹೆರಾಯಿನ್ ಪ್ಯಾಕೇಟ್ ಗಳನ್ನು ಸಾಗಿಸುತ್ತಿದ್ದರು. ಈ ಭಾಗದಲ್ಲಿ ಪದೇ, ಪದೇ, ಮಾದಕ ವಸ್ತು ಸಾಗಿಸಲಾಗುತ್ತದೆ. ಮಾದಕ ವಸ್ತು ಕಳ್ಳಸಾಗಣೆಯ ವ್ಯವಸ್ಥಿತ ಜಾಲವೇ ಇದೆ ಎನ್ನಲಾಗಿದ್ದು, ನಿಯಂತ್ರಣಕ್ಕೆ ಸೇನೆ ಕ್ರಮ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...