alex Certify
ಕನ್ನಡ ದುನಿಯಾ       Mobile App
       

Kannada Duniya

”ಪ್ರಿಯಾಂಕಾ ಗಾಂಧಿಗಿಂತ ಸ್ಮೃತಿ ಸುಂದರವಾಗಿದ್ದಾರೆ”

default

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ  ಚುನಾವಣೆ ಪ್ರಚಾರಕ್ಕಿಳಿಯಲಿದ್ದಾರೆ. ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ನೀಡಿರುವ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರಿದೆ. ಈ ನಡುವೆ ಬಿಜೆಪಿ ನಾಯಕರೊಬ್ಬರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ನಾಯಕ ವಿನಯ್ ಕಟಿಯಾರ್, ಪ್ರಿಯಾಂಕಾ ಗಾಂಧಿ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಮಾಧ್ಯಮವೊಂದರಲ್ಲಿ ಮಾತನಾಡಿದ ವಿನಯ್, ಪ್ರಿಯಾಂಕ ಸುಂದರವಾಗಿದ್ದಾರೆ. ಅವರು ಚುನಾವಣಾ ಪ್ರಚಾರ ನಡೆಸಲಿ. ಅನೇಕ ದಿನಗಳಿಂದ ಅವರು ಹೊರಗೆ ಬಂದಿಲ್ಲ. ಆದ್ರೆ ಅವರಿಗಿಂತ ಸುಂದರವಾದ ಮಹಿಳೆಯರು ಬಿಜೆಪಿಯಲ್ಲಿದ್ದಾರೆ. ಪ್ರಿಯಾಂಕಾಗಿಂತ ಸ್ಮೃತಿ ಇರಾನಿ ಮತ್ತಷ್ಟು ಸುಂದರವಾಗಿದ್ದಾರೆಂದು ಹೇಳಿಕೆ ನೀಡಿದ್ದಾರೆ. ನಾವು ಕೂಡ ಅವರನ್ನು ಪ್ರಚಾರಕ್ಕಿಳಿಸುವ ತಯಾರಿಯಲ್ಲಿದ್ದೇವೆ ಎಂದಿದ್ದಾರೆ.

ಹೊಗಳುವಷ್ಟು ಪ್ರಿಯಾಂಕಾ ಸುಂದರವಾಗಿಲ್ಲ. ಅವರಿಗಿಂತ ಸ್ಮೃತಿ ಸುಂದರವಾಗಿದ್ದು, ಅವರು ಎಲ್ಲಿಗೆ ಹೋಗ್ತಾರೋ ಅಲ್ಲಿ ಜನಸಾಗರ ನೆರೆದಿರುತ್ತೆ ಎಂದಿದ್ದಾರೆ ವಿನಯ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...