alex Certify
ಕನ್ನಡ ದುನಿಯಾ       Mobile App
       

Kannada Duniya

ಆ ದೃಶ್ಯವನ್ನು ನೋಡಿ ಅತ್ತು ಬಿಟ್ರು ಸಚಿವೆ ಸ್ಮೃತಿ ಇರಾನಿ

ಮನೆ ಅಂದ್ರೇನೆ ಭಾವನೆಗಳ ಗುಚ್ಛ. ಆಡಿ ಬೆಳೆದ ಮನೆಯಲ್ಲಿ ನಮ್ಮ ಜೀವನದ ಸವಿ ಸವಿ ನೆನಪುಗಳು ಬೆಸೆದುಕೊಂಡಿರುತ್ತವೆ. ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಚಲಿಸಿ ಮತ್ತೆ ಹುಟ್ಟಿ ಬೆಳೆದ ಮನೆಗೆ ವಾಪಸ್ಸಾಗೋದು ಎಲ್ಲರ ಜೀವನದ ಧ್ಯೇಯ.

ಆದ್ರೆ ಅನೇಕರಿಗೆ ಇದು ಸಾಧ್ಯವಾಗೋದಿಲ್ಲ. ಹುಟ್ಟಿ ಬೆಳೆದ ಮನೆಯನ್ನ ಮತ್ತೆ ನೋಡಿದಾಗ ಬದುಕಿನ ಚಿತ್ರಗಳು ಕರಗಿ ಕಣ್ಣಲ್ಲಿ ನೀರಾಗಿ ಹರಿಯುತ್ತದೆ. ಇಂತದ್ದೇ ಒಂದು ಕಣ್ಣೀರಿನ ಕಥೆ ಇತ್ತೀಚೆಗಷ್ಟೆ ನಟಿ ಮತ್ತು ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಅವರ ವಿಚಾರದಲ್ಲೂ ನಡೆದಿದೆ.

ಏಕ್ತಾ ಕಪೂರ್ ನಿರ್ಮಾಣದ ಹೋಮ್ ಹೆಸರಿನ ಸಂಚಿಕೆಯೊಂದಕ್ಕಾಗಿ ಸ್ಮೃತಿ ಇರಾನಿ ತಾವು ಹುಟ್ಟಿ ಬೆಳೆದ ಮನೆಗೆ 35 ವರ್ಷಗಳ ಬಳಿಕ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಮೃತಿ ಇರಾನಿ ಹುಟ್ಟಿ ಬೆಳೆದ ಮನೆ ಡ್ರೈಕ್ಲೀನ್ ಅಂಗಡಿಯಾಗಿ ಬದಲಾಗಿದೆ. ತಮ್ಮ ಮನೆಯ ಗೇಟ್ ತೆರೆಯುತ್ತಿದ್ದ ಹಾಗೆ ಭಾವುಕರಾದ ಸ್ಮೃತಿ ಇರಾನಿ ತಮ್ಮ ಹಳೆಯ ದಿನಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ.

ಗುರ್ಗಾಂವ್ ನಲ್ಲಿನ ತಮ್ಮ ಹಳೆಯ ಮನೆಗೆ ಭೇಟಿ ನೀಡಿದ ಸ್ಮೃತಿ ಇರಾನಿ ಒಂದು ಕಾಲದಲ್ಲಿ ತಮ್ಮ ಸಹಪಾಠಿಗಳಾಗಿದ್ದವರನ್ನು ನೋಡಿ ಖುಷಿ ಪಟ್ಟರು. ತಮ್ಮ ಹಳೆದ ದಿನಗಳನ್ನ ಮೆಲುಕು ಹಾಕಿದ್ರು. ಮನೆಯಲ್ಲಿ ತಮ್ಮ ನೆನಪುಗಳ ಬಗ್ಗೆ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡಿದ್ರು.

ಈ ಮನೆಯಲ್ಲಿ ಸ್ಮೃತಿ ಇರಾನಿ ತಮ್ಮ ಮೊದಲ ಧಾರಾವಾಹಿ ‘ತುಳಸಿ’ಯಿಂದ ‘ಕ್ಯೂಂಕಿ ಸಾಸ್ ಕಭಿ ಬಹು ಥಿ’ ವರೆಗೂ ವಾಸವಿದ್ದರು. ಮೊದಲ ಮನೆಯ ಬಗ್ಗೆ ಅವರು ಈ ಷೋನಲ್ಲಿ ತುಂಬಾ ಭಾವುಕವಾಗಿ ಮಾತನಾಡಿದ್ದಾರೆ ಅನ್ನೋದು ಇದರಿಂದಲೇ ಗೊತ್ತಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...