alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯ ಆಯ್ಕೆ

ನವದೆಹಲಿ: ಗುಜರಾತ್ ನಲ್ಲಿ ಮತ್ತೆ ಅಧಿಕಾರದ ಗದ್ದುಗೆಗೆ ಏರಿರುವ ಬಿ.ಜೆ.ಪಿ. ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸುವ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಆದರೆ, ವಿಜಯ್ ರೂಪಾನಿ ಕಡಿಮೆ ಅಂತರದಲ್ಲಿ ಗೆದ್ದಿರುವುದು ಮತ್ತು ಸರ್ಕಾರದ ವಿರುದ್ಧದ ಹೋರಾಟಗಳನ್ನು ಶಮನಗೊಳಿಸುವಲ್ಲಿ ಅವರು ವಿಫಲವಾಗಿದ್ದು, ಮತ್ತೆ ಮುಖ್ಯಮಂತ್ರಿಯಾಗಲು ಹಿನ್ನಡೆಯಾಗುವ ಸಾಧ್ಯತೆ ಇದೆ.

ಈ ಕಾರಣದಿಂದ ಬಿ.ಜೆ.ಪಿ. ಹೊಸ ಆಯ್ಕೆಗೆ ಮುಂದಾಗಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೇಳಿ ಬಂದಿದೆ. ವಿಜಯ್ ರೂಪಾನಿ ಅವರ ಬದಲಿಗೆ ಸ್ಮೃತಿ ಇರಾನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಯೋಜಿಸಲಾಗಿದೆ.

ಇವರೊಂದಿಗೆ ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವ ಮನ್ ಸುಖ್ ಎಲ್. ಮಾಂಡವಿಯಾ 2 ನೇ ಆಯ್ಕೆಯಾಗಿದ್ದಾರೆ. 3 ನೇ ಆಯ್ಕೆಯಾಗಿ ಕರ್ನಾಟಕದ ರಾಜ್ಯಪಾಲ, ಗುಜರಾತ್ ವಿಧಾನಸಭೆಯ ಮಾಜಿ ಸ್ಪೀಕರ್ ವಜೂಭಾಯ್ ವಾಲಾ ಅವರಿದ್ದಾರೆ.

ವಿಜಯ್ ರೂಪಾನಿ ಅವರನ್ನು ಮುಂದುವರೆಸದಿರುವ ಕಾರಣ, ಸ್ಮೃತಿ ಇರಾನಿ, ಮನ್ ಸುಖ್ ಎಲ್. ಮಾಂಡವಿಯಾ, ವಜೂಭಾಯ್ ವಾಲಾ ಅವರಲ್ಲಿ ಒಬ್ಬರು ಗುಜರಾತ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...