alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ತಮಾಷೆ ಫೋಸ್ಟ್ ಹಾಕಿ ಸುದ್ದಿಯಾದ ಕೇಂದ್ರ ಸಚಿವೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸ್ಮೃತಿ ಇರಾನಿ ಆಗಾಗ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಸ್ಯಾತ್ಮಕ ಪೋಸ್ಟ್ ಗಳನ್ನು ಹಾಕ್ತಿರುತ್ತಾರೆ. ಸ್ಮೃತಿ ಇನ್ಸ್ಟಾ ಅಕೌಂಟ್ ನಲ್ಲಿ ಫನ್ನಿ ಫೋಸ್ಟ್ ಗಳ ಸಂಖ್ಯೆಯೇ ಹೆಚ್ಚಿದೆ. ಈಗ ಮತ್ತೊಂದು ಫೋಟೋವನ್ನು ಸ್ಮೃತಿ ಹಾಕಿದ್ದಾರೆ.

ಈ ಫೋಟೋದಲ್ಲಿ ಏಣಿ ಮೇಲೆ ಪತಿ ಕುಳಿತಿದ್ದು, ಕೆಳಗೆ ಸ್ಮೃತಿ ಕುಳಿತಿದ್ದಾರೆ. ಸ್ಮೃತಿ, ದೇವರೆ ನನ್ನ ಮೇಲೆ ಕರುಣೆ ತೋರಿಸು. ನನ್ನನ್ನಲ್ಲ ನನ್ನ ತೂಕವನ್ನು ತೆಗೆದುಕೋ ಎನ್ನುತ್ತಿದ್ದಾರೆ.

ಇದಕ್ಕೆ ಮೇಲೆ ಕುಳಿತ ಪತಿ ಇರಾನಿ, ಇವಳನ್ನು ತೆಗೆದುಕೊಂಡು ಹೋದ್ರೂ ನಡೆಯುತ್ತೆ ಎನ್ನುತ್ತಾರೆ. ಈ ಫೋಟೋ ಜೊತೆ ` ಜನ, ನನ್ನ ಪತಿಯ ಪತ್ನಿ ತುಂಬಾ ಸುಂದರವಾಗಿದ್ದಾಳೆ ಎನ್ನುತ್ತಾರೆ. ಇದು ಸತ್ಯ’ ಎಂದು ಶೀರ್ಷಿಕೆ ಹಾಕಿದ್ದಾರೆ. ಸ್ಮೃತಿ ಈ ಫೋಟೋವನ್ನು ಈವರೆಗೆ 20 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಸ್ಮೃತಿ ಸ್ಥೂಲಕಾಯದ ಬಗ್ಗೆ ಹಾಸ್ಯಾಸ್ಪದ ಫೋಸ್ಟ್ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಸ್ಮೃತಿ ಸಾಕಷ್ಟು ಬಾರಿ ಕಮೆಂಟ್ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೆ ಲೋಕಸಭೆ ಚುನಾವಣೆ ಪ್ರಚಾರದ ನಂತ್ರ ತನ್ನ ತೂಕ ಇಳಿಸಿಕೊಳ್ಳುವ ಅಭಿಯಾನ ಶುರುಮಾಡಬೇಕು ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...