alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನಷ್ಟು ಆರಾಮದಾಯಕವಾಗಿರಲಿದೆ ರೈಲು ಪ್ರಯಾಣ

ದೇಶದ ರಾಜಧಾನಿಯ ರೈಲ್ವೆ ಪ್ರಯಾಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರೋದಕ್ಕೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಆ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಡುವ 13 ರಾಜಧಾನಿ ಮತ್ತು 11 ಶತಾಬ್ದಿ ಎಕ್ಸ್ ಪ್ರೆಸ್ ಪ್ರಯಾಣ ಇನ್ನಷ್ಟು ಸುಖಕರ ಮತ್ತು ಆರಾಮದಾಯಕವಾಗಲಿದೆ. ಸದ್ಯ ರೈಲುಗಳಲ್ಲಿ ಬಳಕೆಯಲ್ಲಿರುವ ಕೂಪ್ಲರ್ಸ್ ಮತ್ತು ಶಾಕ್ ಅಬ್ಸರ್ವ್ ಗಳನ್ನ ಬದಲಿಸೋಕೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಬೋಗಿಗಳ ಮಧ್ಯೆ ಇರುವ ಕೂಪ್ಲರ್ಸ್ ಗಳು ಮತ್ತು ಶಾಕ್ ಅಬ್ಸರ್ವ್ ಗಳು ಪ್ರಯಾಣಿಕರಿಗೆ ಕೆಲವೊಮ್ಮೆ ಜರ್ಕ್ ಹೊಡೆದಂತಾ ಅನುಭವವನ್ನು ನೀಡುತ್ತಿದೆ. ಅತಿಯಾದ ಬಳಕೆಯಿಂದಾಗಿ ಅವುಗಳ ಗುಣಮಟ್ಟ ಕಡಿಮೆಯಾಗಿದ್ದು, ಈಗ ಹೊಸ ಶಾಕ್ ಅಬ್ಸರ್ವ್ ಮತ್ತು ಕೂಪ್ಲರ್ಸ್ ಗಳನ್ನ ಬಳಸೋಕೆ ರೈಲ್ವೆ ಇಲಾಖೆ ಮುಂದಾಗಿದೆ.

ಅಕ್ಟೋಬರ್ ವೇಳೆಗೆ ಹೊಸ ಕೂಪ್ಲರ್ಸ್ ಮತ್ತು ಶಾಕ್ ಅಬ್ಸರ್ವ್ ಗಳ ಅಳವಡಿಕೆ ಕಾರ್ಯ ಮುಕ್ತಾಯಗೊಳ್ಳಲಿದೆ. ಬಫರ್ ಕೂಪ್ಲರ್ಸ್ ಅನ್ನೋ ಹೊಸ ಸಾಧನಗಳನ್ನ ರೈಲುಗಳಲ್ಲಿ ಅಳವಡಿಸಲಾಗುತ್ತಿದ್ದು, ಇವುಗಳನ್ನ ಮಷಿನ್ ಮೂಲಕವೂ ನಿಯಂತ್ರಿಸಬಹುದಾಗಿದೆಯಂತೆ. ಇದರಿಂದ ಸುರಕ್ಷತೆಯ ಗುಣಮಟ್ಟವೂ ಹೆಚ್ಚಾಗಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...