alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ! ನಿಮ್ಮ ‘ಜೀವನ’ವನ್ನು ನರಕವನ್ನಾಗಿಸಬಹುದು ಸ್ಮಾರ್ಟ್ ಫೋನ್

ಇಂದು ಸ್ಮಾರ್ಟ್ ಫೋನ್ ಗಳ ಬಳಕೆ ವ್ಯಾಪಕವಾಗಿದೆ. ಜೊತೆಗೆ ಅಗ್ಗದ ದರದಲ್ಲಿ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಸೇವೆ ನೀಡುತ್ತಿರುವ ಕಾರಣ ಬಹುತೇಕರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಇಂಟರ್ನೆಟ್ ಬಳಸುತ್ತಿದ್ದಾರೆ.

ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಇಂಟರ್ನೆಟ್ ನಿಮ್ಮ ಜೀವನವನ್ನೇ ನರಕ ಸದೃಶ್ಯವನ್ನಾಗಿಸಬಹುದು ಎಂಬ ಎಚ್ಚರ ಇರಲಿ. ಬಹಳಷ್ಟು ಮಂದಿ ತಮ್ಮ ಸ್ಮಾರ್ಟ್ ಪೋನ್ ಗಳಲ್ಲಿ ಪ್ರೇಯಸಿ ಅಥವಾ ಪತ್ನಿಯರೊಂದಿಗಿನ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದಿರುತ್ತಾರೆ. ಆದರೆ ಇದಕ್ಕೆ ಯಾವುದೇ ಪಾಸ್ ವರ್ಡ್ ನೀಡುವ ಮೂಲಕ ಸೇವ್ ಮಾಡಿಟ್ಟುಕೊಳ್ಳದಿದ್ದಲ್ಲಿ ಅಚಾನಕ್ ಆಗಿ ಬೇರೆಯವರಿಗೂ ಸೆಂಡ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ.

ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಯಡವಟ್ಟು ಮಾಡಿಕೊಂಡವನೊಬ್ಬ ತನ್ನ ಪ್ರೇಯಸಿಯೊಂದಿಗಿನ ಖಾಸಗಿ ಕ್ಷಣಗಳನ್ನು ಬೇರೆಯವರಿಗೆ ಕಳುಹಿಸುವ ಮೂಲಕ ತಲೆತಗ್ಗಿಸುವಂತಹ ಪರಿಸ್ಥಿತಿ ಎದುರಾಗಿತ್ತು. ಜೊತೆಗೆ ಇಂತಹ ದೃಶ್ಯಗಳನ್ನು ಸೇವ್ ಮಾಡಿಕೊಂಡಿರುವವರು ಒಂದೊಮ್ಮೆ ತಮ್ಮ ಸ್ಮಾರ್ಟ್ ಫೋನ್ ಹಾಳಾದ ಸಂದರ್ಭದಲ್ಲಿ ಅದನ್ನು ಸರಿಪಡಿಸಲು ರಿಪೇರಿಗೆ ನೀಡಿದ ಸಂದರ್ಭದಲ್ಲೂ ದುರುಪಯೋಗವಾದ ಉದಾಹರಣೆಗಳಿವೆ.

ಹಾಗಾಗಿ ಸ್ಮಾರ್ಟ್ ಫೋನ್ ಬಳಕೆ ವೇಳೆ ಬಲು ಎಚ್ಚರಿಕೆ ವಹಿಸಬೇಕು. ಸ್ಮಾರ್ಟ್ ಫೋನ್ ಗಳಲ್ಲಿ ತೊಂದರೆ ತಲೆದೋರಿದ ಸಂದರ್ಭದಲ್ಲಿ ರಿಪೇರಿಗೆ ಕೊಡುವ ಮುನ್ನ ಅಂತಹ ಫೋಟೋ ಅಥವಾ ವಿಡಿಯೋಗಳಿದ್ದಲ್ಲಿ ಡಿಲಿಟ್ ಮಾಡಿ ರಿಪೇರಿಗೆ ನೀಡಬೇಕು. ಫೋನ್ ಸಂಪೂರ್ಣ ರಿಪೇರಿ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದಲ್ಲಿ ‘ಫ್ಯಾಕ್ಟರಿ ರೀ ಸೆಟ್’ ಮಾಡಿ ನೀಡಿದರೆ ಉತ್ತಮ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...