alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆಗಣ್ಣಲ್ಲಿ ಹಾವಿನ ತಲೆ ನುಂಗಿದ ಭೂಪ !

SNAKE HEADಇಂದೋರ್ ನಲ್ಲಿ ನಡೆದ ವಿಲಕ್ಷಣ ಘಟನೆ ಇದು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ರಘುವಂಶಿ ಸೆಪ್ಟೆಂಬರ್ 8ರಂದು ತನ್ನ ಶಿಫ್ಟ್ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದ. ಕೋಣೆಗೆ ಹೋಗಿ ಮಲಗಿದವನಿಗೆ ಅದೆಂಥಾ ನಿದ್ದೆ ಹತ್ತಿತ್ತೆಂದ್ರೆ ಇಹಲೋಕದ ಪರಿವೆಯೇ ಇರಲಿಲ್ಲ.

ಬಾಯ್ತೆರೆದು ಮಲಗಿದ್ದ ರಘುವಂಶಿಗೆ ಬಾಯಲ್ಲಿ ಅದೇನೋ ಬಿದ್ದಂತಾಗಿತ್ತು. ನಿದ್ದೆಗಣ್ಣಲ್ಲೇ ಆತ ಅದನ್ನು ಕಚ್ಚಿ ನುಂಗಿದ್ದ. ಮಗನನ್ನು ಎಬ್ಬಿಸಲೆಂದು ಬಂದ ರಾಮ್ ಪ್ಯಾರಿಗೆ ಶಾಕ್. ರಘುವಂಶಿ ಮುಖದ ಮೇಲೆಲ್ಲಾ ರಕ್ತವಿತ್ತು, ಪಕ್ಕದಲ್ಲೇ ತಲೆಯೇ ಇಲ್ಲದ ಹಾವೊಂದು ಸತ್ತು ಮಲಗಿತ್ತು.

ಗಾಬರಿಯಾದ ರಾಮ್ ಪ್ಯಾರಿ ಮಗನನ್ನು ಎಬ್ಬಿಸಿ ಪೀರ್ ಬಾಬಾನ ಬಳಿ ಕರೆದೊಯ್ದಿದ್ದಾಳೆ. ಆತ ಅದೇನೋ ಮದ್ದು ಕೊಟ್ಟು ವಾಂತಿ ಮಾಡಿಸಿದಾಗ, ರಘುವಂಶಿ ಹೊಟ್ಟೆಯಲ್ಲಿದ್ದ ಹಾವಿನ ತಲೆ ಹೊರಬಂದಿದೆ. ಕೂಡಲೇ ಆತನನ್ನು ಮಹಾರಾಜಾ ಯಶ್ವಂತರಾವ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ರಘುವಂಶಿ ನಿದ್ದೆಗಣ್ಣಲ್ಲಿ ಹಾವಿನ ತಲೆ ಕಚ್ಚಿ ನುಂಗಿದ ಸುದ್ದಿ ಇಂದೋರ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...