alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಜೊತೆ ಉಪಹಾರ ಸವಿದ ಮೋದಿ

modi-mother-759

ಪ್ರಧಾನಿ ನರೇಂದ್ರ ಮೋದಿ ಇವತ್ತು ತಮ್ಮ ತವರು ಗುಜರಾತ್ ನಲ್ಲಿದ್ದಾರೆ. ಇಂದು ಬೆಳಗ್ಗೆ ಯೋಗಾಸನ ಮಾಡುವ ಬದಲು ಮೋದಿ ಆ ಸಮಯದಲ್ಲಿ  ತಾಯಿಯನ್ನು ಭೇಟಿ ಮಾಡಿದ್ದಾರೆ. ತಾಯಿ ಹೀರಾಬೆನ್ ಜೊತೆ ಬೆಳಗಿನ ಉಪಹಾರ ಮಾಡಿದ ಮೋದಿ, ಅವರ ಯೋಗಕ್ಷೇಮ ವಿಚಾರಿಸಿಕೊಂಡ್ರು.

ಅಮ್ಮನ ಜೊತೆ ಸಮಯ ಕಳೆದಿದ್ದು ಖುಷಿ ಕೊಟ್ಟಿದೆ ಅಂತಾ ಖುದ್ದು ಮೋದಿ ಟ್ವೀಟ್ ಮಾಡಿದ್ದಾರೆ. ಮೋದಿ ತಾಯಿ ಹೀರಾಬಾ ಅವರಿಗೆ ಈಗ 97 ವರ್ಷ. ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಜೊತೆಗೆ ಗುಜರಾತ್ ನ ಗಾಂಧಿನಗರದ ಹೊರವಲಯದಲ್ಲಿ ವಾಸವಾಗಿದ್ದಾರೆ.

ಗಾಂಧಿನಗರಕ್ಕೆ ಬಂದಾಗಲೆಲ್ಲ ಮೋದಿ ತಾಯಿಯ ಆಶೀರ್ವಾದ ಪಡೆದೇ ಪಡೆಯುತ್ತಾರೆ. ತಮ್ಮ ಹುಟ್ಟುಹಬ್ಬದಂದು ಕೂಡ ಅಮ್ಮನನ್ನು ಭೇಟಿ ಮಾಡ್ತಾರೆ. ಇವತ್ತು ಮೋದಿ ‘ಇಂಡಿಯಾ ಐಎನ್ಎಕ್ಸ್’ ಉದ್ಘಾಟನೆಗಾಗಿ ಗಾಂಧಿನಗರಕ್ಕೆ ಆಗಮಿಸಿದ್ದಾರೆ. ಗಾಂಧಿನಗರ ರೈಲು ನಿಲ್ದಾಣದ ಅಭಿವೃದ್ಧಿಗೂ ಶಿಲಾನ್ಯಾಸ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...