alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ ಆಗಲು ನರಪೇತಲ ಮಾಡ್ದ ಇಂಥ ಕೆಲಸ…!

ನಗದು, ಆಭರಣವೊಂದೇ ಅಲ್ಲ ಪ್ರೋಟೀನ್ ವಸ್ತುಗಳು ಕೂಡ ಇತ್ತೀಚಿನ ದಿನಗಳಲ್ಲಿ ಕಳ್ಳತನವಾಗ್ತಿದೆ. ಇದಕ್ಕೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ರೌಡಿಸಂಗಾಗಿ ಬಾಡಿ ಬೆಳೆಸಲು ಮುಂದಾದ 20 ವರ್ಷದ ವ್ಯಕ್ತಿಯೊಬ್ಬ ಜಿಮ್ ಗೆ ನುಗ್ಗಿ ಪ್ರೋಟೀನ್ ತುಂಬಿದ್ದ ಬ್ಯಾಗ್ ಹೊತ್ತೊಯ್ದಿದ್ದಾನೆ.

ಸುಮಾರು 35 ಕೆ.ಜಿಯಿದ್ದ ಬ್ಯಾಗ್ ಹೊತ್ತೊಯ್ದ ವ್ಯಕ್ತಿ ಜೊತೆ ಮೂವರು ಸ್ನೇಹಿತರು ಬಂದಿದ್ದರು. ಪ್ರೋಟೀನ್ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿದ ಆರೋಪಿ ಪ್ರೋಟೀನ್ ಜೊತೆ ಸಿಸಿ ಟಿವಿ ಡಿವಿಆರ್ ಕೂಡ ತೆಗೆದುಕೊಂಡು ಹೋಗಿದ್ದಾನೆ. ದೆಹಲಿ ಉತ್ತರ ರೋಹಿಣಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಸೋಮವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ಬಡಕಲು ವ್ಯಕ್ತಿ ಪ್ರೋಟೀನ್ ಅಂಗಡಿಗೆ ಬಂದು ಬಾಡಿ ಬೆಳೆಸಲು ಪ್ರೋಟೀನ್ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಅಂಗಡಿಯಾತ ಒಪ್ಪಿಗೆ ನೀಡಿಲ್ಲ. ಕೆಲವೊಂದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಜಿಮ್ ಸಲಹೆಗಾರರಿಂದ ಯಾವುದು ಸೂಕ್ತವೆಂದು ಕೇಳಿಕೊಂಡು ಬಾ ಎಂದಿದ್ದಾರೆ. ಸ್ವಲ್ಪ ಸಮಯ ಬಿಟ್ಟು ಸ್ನೇಹಿತರ ಜೊತೆ ಬಂದ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...