alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗೆ ಹೋಗಿದ್ದ ಬಾಲಕಿ ಮರಳಿ ಬಂದಿದ್ದು ಶವವಾಗಿ

ಹೈದ್ರಾಬಾದ್ ನಲ್ಲಿ ಶಾಲಾ ಬಸ್ ಹರಿದು 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಒಂದನೇ ತರಗತಿಯ ವಿದ್ಯಾರ್ಥಿನಿ ಅಂಜಲಿ ಮೃತ ದುರ್ದೈವಿ. ಅಂಜಲಿ ಬಸ್ ನ ಎರಡನೇ ಸೀಟಿನಲ್ಲಿ ಕುಳಿತಿದ್ಲು. ಚಾಲಕ ಬಸ್ ಬಾಗಿಲನ್ನು ತೆರೆದೇ ಇಟ್ಟಿದ್ದ.

ಸ್ಪೀಡ್ ಬ್ರೇಕರ್ ಇದ್ದಿದ್ರಿಂದ ಬಸ್ ಅನ್ನು ಸ್ಲೋ ಮಾಡಿದ ಚಾಲಕ ನಂತರ ಒಮ್ಮೆಲೇ ಎಕ್ಸಲೇಟರ್ ಕೊಟ್ಟಿದ್ದಾನೆ. ಆ ರಭಸಕ್ಕೆ ಅಂಜಲಿ ಸೀಟಿನಿಂದ ಜಾರಿ ರಸ್ತೆಗೆ ಬಿದ್ದಿದ್ದಾಳೆ. ಅವಳ ತಲೆಯ ಮೇಲೆ ಬಸ್ ನ ಟೈರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಂಜಲಿ ಪ್ರಶಾಂತಿ ವಿದ್ಯಾನಿಕೇತನ ಶಾಲೆಯಲ್ಲಿ ಓದುತ್ತಿದ್ಲು. ಚಾಲಕ ನರಸಿಂಹನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...