alex Certify
ಕನ್ನಡ ದುನಿಯಾ       Mobile App
       

Kannada Duniya

ಇಯರ್ ಫೋನ್ ನಿಂದಾಗಿ 6 ಬಾಲಕರ ದುರಂತ ಸಾವು

ಉತ್ತರ ಪ್ರದೇಶದ ಹರ್ಪುರ್ ಜಿಲ್ಲೆಯ 14 ರಿಂದ 16 ವರ್ಷ ವಯಸ್ಸಿನ 6 ಬಾಲಕರು ಚಲಿಸುತ್ತಿರುವ ರೈಲಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಹುಡುಗರು ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೆ ಹಳಿಯ ಬಳಿ ನಡೆದುಕೊಂಡು ಹೋಗುತ್ತಿದ್ರು .

ಹಾಗಾಗಿ ರೈಲು ಬಂದ ಶಬ್ಧ ಒಬ್ಬರಿಗೂ ಕೇಳಿಸಿಲ್ಲ. ವೇಗವಾಗಿ ಬಂದ ರೈಲು ಅವರ ಮೈಮೇಲೆ ಹರಿದು ಹೋಗಿದೆ. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೆಹಲಿ-ಮೊರಾದಾಬಾದ್ ಮಾರ್ಗದಲ್ಲಿರುವ ಪಿಲಖುವಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಈ ಬಾಲಕರು ಗಾಜಿಯಾಬಾದ್ ನಿಂದ ಹೈದ್ರಾಬಾದ್ ಗೆ ರೈಲಿನಲ್ಲಿ ತೆರಳಬೇಕಿತ್ತು. ಆದ್ರೆ ಟ್ರೈನ್ ಮಿಸ್ ಮಾಡಿಕೊಂಡಿದ್ರಿಂದ ಪಿಲಖುವಾ ಕಡೆಗೆ ವಾಪಸ್ ಬರುತ್ತಿದ್ರು. ಈ ದುರ್ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಪ್ರತಿಭಟನೆ ಕೂಡ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...