alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮಂಟಪದಿಂದ ಓಡಿದ್ರು ವಧು-ವರ…!

ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವಧು-ವರ ವೇದಿಕೆ ಮೇಲೆ ಕುಳಿತಿದ್ದರು. ವರಮಾಲೆ ಶಾಸ್ತ್ರಕ್ಕೆ ಸಿದ್ಧವಾಗ್ತಿದ್ದರು. ಮದುವೆ ಹಾಲ್ ಸಂಬಂಧಿಕರು, ಸ್ನೇಹಿತರಿಂದ ತುಂಬಿತ್ತು. ಶಾಂತವಾಗಿ ಮದುವೆ ನೋಡ್ತಿದ್ದ ಜನರು ಏಕಾಏಕಿ ಓಡಲು ಶುರುಮಾಡಿದ್ರು. ಮದುವೆ ಶಾಸ್ತ್ರದಲ್ಲಿದ್ದ ವಧು-ವರ ಕೂಡ ಓಡಿದ್ರು.

ಕಲ್ಯಾಣ ಮಂಟಪದ ಔತಣ ಕೂಟದ ಗೋಡೆ ಕುಸಿದಿದ್ದೇ ಎಲ್ಲರೂ ಓಡಲು ಕಾರಣವಾಯ್ತು. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 6 ಮಂದಿಗೆ ಗಾಯಗಳಾಗಿವೆ. ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಔತಣ ಕೂಟದ ಗೋಡೆ ಕುಸಿಯುತ್ತಿದ್ದಂತೆ ಮದುವೆಗೆ ಬಂದ ಎಲ್ಲರೂ ಅತ್ತಿಂದಿತ್ತ ಓಡಲು ಶುರು ಮಾಡಿದ್ದಾರೆ. ವಧು-ವರ ಕೂಡ ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಕಲ್ಯಾಣ ಮಂಟಪದ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...