alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸ್ ಮಾಡುತ್ತಾ ಕಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್

ಭಾರತ ಮತ್ತು ಲಾಹೋರ್ ಗಡಿ ಪ್ರದೇಶದ ಬಳಿ ದರೋಡೆಗೆ ಯತ್ನಿಸಿದ್ದ ಆರು ಮಂದಿ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಗಳನ್ನ ಸೆರೆಹಿಡಿಯಲಾಗಿದೆ.

ಉತ್ತರ ದೆಹಲಿಯಲ್ಲಿ ಕಳ್ಳತನಕ್ಕೂ ಮುನ್ನ ನೃತ್ಯವನ್ನು ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ ದರೋಡೆಕೋರರ ಗುಂಪಿನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಹಲವು ಅಂಗಡಿ ಮುಂಗಟ್ಟುಗಳ ಬಳಿ ದಾಂಧಲೆ ನಡೆಸಿ ಹಣ, ಒಡವೆಯನ್ನು ಕದಿಯುತ್ತಿದ್ದ ಗ್ಯಾಂಗ್ ಇದಾಗಿತ್ತು.

ಬಂಧಿತರನ್ನು ಆಲಾಮ್, ಆನಂದ್, ಸಾಹೀಬ್ ಅನ್ಸಾರಿ, ಮೊಹಮ್ಮದ್ ಸಫೀಕ್, ಸಲ್ಮಾನ್ ಮತ್ತು ಅನಿಲ್ ಅಂತ ಗುರುತಿಸಲಾಗಿದೆ. ಒಂದು ಆಟೋರಿಕ್ಷಾ, ಎರಡು ಲ್ಯಾಪ್ ಟಾಪ್, ಒಂದು ಎಲ್ಸಿಡಿ ಟಿವಿ, ಇತರೆ ಎಲೆಕ್ಟ್ರಿಕಲ್ ಐಟಂಗಳು ಮತ್ತು ಬೀಗ ಮುರಿಯುವ ಸಾಧನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 10 ರಂದು ಇದೇ ಗ್ಯಾಂಗ್ ನಾವೆಲ್ಟಿ ಸಿನಿಮಾ ಪ್ರದೇಶದ ನಾಲ್ಕು ಅಂಗಡಿಗಳಲ್ಲಿ ದರೋಡೆ ನಡೆಸಿತ್ತು ಅಂತ ಪೊಲೀಸರು ತಿಳಿಸಿದ್ದಾರೆ. ಸಿಸಿ ಟಿವಿಯೊಂದರ ಬಳಿ ನೃತ್ಯ ಮಾಡುತ್ತಿದ್ದವರ ಮೇಲೆ ಪೊಲೀಸರು ಅನುಮಾನಪಟ್ಟಿದ್ದರು. ಅವರು ಮೂರು ಬಣ್ಣಗಳಿದ್ದ ಆಟೋದಲ್ಲಿ ತೆರಳಿದ್ದನ್ನ ನೋಡಿದ್ದರು. ದರೋಡೆಕೋರರು ಉಪಯೋಗಿಸುತ್ತಿದ್ದ ಆಟೋರಿಕ್ಷಾ ಕೊನೆಗೆ ಅವರನ್ನೇ ಪೊಲೀಸರ ಬಲೆಗೆ ಸಿಲುಕಿಸಿದೆ.

ಇದಕ್ಕಾಗಿ ಆರ್ಟಿಓ ಇಲಾಖೆ ಸಹಯೋಗದೊಂದಿಗೆ ಪೊಲೀಸರು ಸುಮಾರು 3000 ಆಟೋ ರಿಕ್ಷಾಗಳನ್ನ ಶಾರ್ಟ್ ಲಿಸ್ಟ್ ಮಾಡಿದರಂತೆ. ಆನಂತರದಲ್ಲಿ ಇಬ್ಬರ ಮೇಲೆ ಹೆಚ್ಚಿನ ಸಂಶಯಪಟ್ಟು ತನಿಖೆ ಮುಂದುವರೆಸಿ ಇಡೀ ತಂಡವನ್ನೇ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...