alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿ ಕುಳಿತು ಮಗನ ‘ಘನಕಾರ್ಯ’ ವೀಕ್ಷಿಸಿದ ಶಾಸಕ

ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿ ಶಾಸಕರ ಪುತ್ರನೊಬ್ಬ ಟೋಲ್ ಬೂತ್ ನಲ್ಲಿರೋ ಸಿಬ್ಬಂದಿಗೆ ಥಳಿಸಿದ್ದಾನೆ. ಶಾಸಕ ಪೂರಣ್ ಪ್ರಕಾಶ್ ಮಗ ಮಾಡಿದ ಘನಕಾರ್ಯವನ್ನು ಕಾರಿನಲ್ಲಿ ಕುಳಿತು ವೀಕ್ಷಿಸುತ್ತಿದ್ರು. ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.

ತಂದೆ-ಮಗನ ದರ್ಪ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾಸಕರ ಕಾರು ವಿಐಪಿ ಲೇನ್ ಮೂಲಕ ನುಗ್ಗಿ ಹೋಗಲು ಯತ್ನಿಸಿದೆ. ಈ ವೇಳೆ ಅಲ್ಲಿ ಅಳವಡಿಸಿದ್ದ ಬೂಮ್ ಬ್ಯಾರಿಯರ್ ಕಾರಿನ ಮೇಲೆ ಬಿದ್ದಿದೆ. ಕೂಡಲೇ ಟೋಲ್ ಸಿಬ್ಬಂದಿ ಬ್ಯಾರಿಯರ್ ಅನ್ನು ಬದಿಗೆ ಸರಿಸಿದ್ದಾರೆ.

ಆದ್ರೆ ಕಾರಿನಿಂದ ಇಳಿದ ಶಾಸಕರ ಪುತ್ರ ಮತ್ತವನ ಬೆಂಬಲಿಗರು ಟೋಲ್ ಸಿಬ್ಬಂದಿಯನ್ನು ಥಳಿಸಿದ್ದಾರೆ. ಉತ್ತರ ಪ್ರದೇಶದ ಬಲ್ದೇವ್ ಕ್ಷೇತ್ರದ ಶಾಸಕರಾಗಿರೋ ಪೂರಣ್ ಪ್ರಕಾಶ್, ತಮ್ಮ ಪುತ್ರ ಮಾಡಿರೋ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...