alex Certify
ಕನ್ನಡ ದುನಿಯಾ       Mobile App
       

Kannada Duniya

ಸೀತೆಯನ್ನು ಅಪಹರಿಸಿದ್ದು ರಾವಣನಲ್ಲ ರಾಮ…!

ಸೀತಾ ಮಾತೆಯನ್ನು ಯಾರು ಅಪಹರಿಸಿದ್ದು? ಈ ಪ್ರಶ್ನೆಗೆ ಎಲ್ಲ ಮಕ್ಕಳೂ ಉತ್ತರ ನೀಡ್ತಾರೆ. ಲಂಕಾಧಿಪತಿ ರಾವಣ ಸೀತೆಯನ್ನು ಅಪಹರಿಸಿದ್ದು ಎನ್ನುತ್ತಾರೆ. ಆದ್ರೆ ಗುಜರಾತಿನ 12ನೇ ತರಗತಿ ಸಂಸ್ಕೃತ ಪುಸ್ತಕದಲ್ಲಿ ಸೀತೆಯನ್ನು ಅಪಹರಿಸಿದ್ದು ರಾವಣನಲ್ಲ ರಾಮ ಎಂದಿದೆ.

ಸಂಸ್ಕೃತ ಸಾಹಿತ್ಯ ಪುಸ್ತಕದ 106ನೇ ಪುಟದಲ್ಲಿ ಸೀತೆಯನ್ನು ಅಪಹರಿಸಿದ್ದು ರಾವಣನಲ್ಲ ರಾಮ ಎಂದಿದೆ. ಪುಸ್ತಕ ಅನುವಾದಕರಿಂದ ಈ ತಪ್ಪು ನಡೆದಿದೆ ಎಂದು ಮಾಧ್ಯಮ ಮೂಲಗಳು ಹೇಳಿವೆ. ರಾವಣನ ಬದಲು ತಪ್ಪಾಗಿ ರಾಮ ಎಂದು ಬರೆದಿದ್ದಾರೆ.

ಗುಜರಾತಿನ ಪಠ್ಯ ಪುಸ್ತಕದಲ್ಲಿ ಈ ತಪ್ಪು ನಡೆದಿಲ್ಲ. ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಪುಸ್ತಕದಲ್ಲಿ ಮಾತ್ರ ಈ ತಪ್ಪಿದೆ. ಗುಜರಾತ್ ಶಿಕ್ಷಣ ಇಲಾಖೆ ತಪ್ಪೊಪ್ಪಿಕೊಂಡಿದೆ. ಪ್ರೂಫ್ ರೀಡರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ವಿಚಾರಣೆ ನಡೆಯಲಿದೆ. ಅವ್ರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...