alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ ರಹೀಂ ಮುಂದೆ 275 ಪ್ರಶ್ನೆಯಿಟ್ಟ ಎಸ್ಐಟಿ

ಡೇರಾ ಸಚ್ಚಾ ಆಶ್ರಮದ ಪ್ರಮುಖ ಗುರ್ಮಿತ್ ರಾಮ್ ರಹೀಂ ನನ್ನು ಎಸ್ಐಟಿ ತಂಡ ವಿಚಾರಣೆ ನಡೆಸಿದೆ. ಪಂಚಕುಲಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ರಾಮ್ ರಹೀಂನನ್ನು ಸುನಾರಿಯಾ ಜೈಲಿನಲ್ಲಿ ವಿಚಾರಣೆ ನಡೆಸಿದೆ. ಪಂಚಕುಲಾದಿಂದ ಬಂದಿದ್ದ ತಂಡವೊಂದು ಸುಮಾರು 6 ಗಂಟೆಗೂ ಹೆಚ್ಚು ಕಾಲ ರಾಮ್ ರಹೀಂನಿಂದ ಮಾಹಿತಿ ಪಡೆದಿದೆ.

ಬುಧವಾರ ಜೈಲಿಗೆ ಭೇಟಿ ನೀಡಿದ್ದ ಎಸ್ಐಟಿ ತಂಡ 275 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಬಂದಿತ್ತು ಎನ್ನಲಾಗಿದೆ. ಇದ್ರಲ್ಲಿ ಕೆಲ ಪ್ರಶ್ನೆಗಳಿಗೆ ರಾಮ್ ರಹೀಂ ಉತ್ತರ ನೀಡಿದ್ದಾನಂತೆ. ವಿಚಾರಣೆ ನಂತ್ರ ತಂಡ ಪಂಚಕುಲಾಕ್ಕೆ ವಾಪಸ್ ಹೋಗಿದೆ. ಮತ್ತೆ ಗುರ್ಮಿತ್ ವಿಚಾರಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಆಗಸ್ಟ್ 25ರಂದು ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಗುರ್ಮಿತ್ ರಾಮ್ ರಹೀಂಗೆ ಸಿಬಿಐ ವಿಶೇಷ ಕೋರ್ಟ್ ಜೈಲು ಶಿಕ್ಷೆ ವಿಧಿಸಿತ್ತು. ಆ ನಂತ್ರ ಪಂಚಕುಲಾ ಸೇರಿದಂತೆ ರಾಜ್ಯದ ಅನೇಕ ಕಡೆ ಗಲಭೆಗಳಾಗಿದ್ದವು. ಈ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿತ್ತು.

ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ಸೇರಿದಂತೆ ಹಿಂಸೆಗೆ ಸಂಬಂಧಿಸಿದಂತೆ ಅನೇಕರ ವಿಚಾರಣೆ ನಡೆಸಿದ್ದ ಎಸ್ಐಟಿ, ಗುರ್ಮಿತ್ ಮುಂದೆ 275 ಪ್ರಶ್ನೆಗಳನ್ನಿಟ್ಟಿದೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...