alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಕನಸು ಸಾಕಾರಗೊಳಿಸಿದ ಕೇರಳ ಸರ್ಕಾರ

ಕೆಲ ತಿಂಗಳ ಹಿಂದೆ ಕೇರಳದಲ್ಲಿ ಮಾನವೀಯತೆಯ ನೆಲಗಟ್ಟನ್ನೇ ಪ್ರಶ್ನಿಸುವ ಒಂದು ಘಟನೆ ನಡೆದಿತ್ತು. ಆಹಾರ ಪದಾರ್ಥಗಳನ್ನ ಕದ್ದ ಆರೋಪದ ಮೇಲೆ ಜನರ ಗುಂಪು ಮಧು ಎಂಬ ಬುಡಕಟ್ಟು ಜನಾಂಗದ ಯುವಕನನ್ನ ದಾರುಣವಾಗಿ ಕೊಂದಿತ್ತು. ಆ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

ಆ ಘಟನೆಗೆ ಸಂಬಂಧಿಸಿದ ವಿಚಾರವೊಂದು ಈಗ ಕೇರಳದಲ್ಲಿ ಸಾಕಷ್ಟು ಸುದ್ದಿಮಾಡ್ತಿದೆ. ಮೃತ ಮಧುವಿನ ಸೋದರಿ ಚಂದ್ರಿಕಾಗೆ ಪೊಲೀಸ್ ಆಫೀಸರ್ ಆಗಬೇಕು ಅನ್ನೋದೇ ಗುರಿಯಾಗಿತ್ತು. ಮಧುವಿನ ಸಾವು ಸಂಭವಿಸೋ ಹಿಂದಿನ ದಿನ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದರು.

ಆದ್ರೆ ಮಧು ಸಾವಿನ ನಂತರದಲ್ಲಿ ಆಕೆ ಕನಸಿನ ಉದ್ಯೋಗ ಪಡೆಯುವ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸೋಕೆ ಮನಸ್ಸು ಮಾಡಿರಲಿಲ್ಲ. ಆದ್ರೂ ಮನೆಯವರ ಒತ್ತಾಯಕ್ಕೆ ಮಣಿದು ತಮ್ಮನ ಸಾವಿನ ನೋವಿನ ನಡುವೆ ಉಳಿದ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿದ್ರು. ಆ ಕಷ್ಟವನ್ನ ಪರಿಗಣಿಸಿರುವ ಕೇರಳ ಸರ್ಕಾರ ಚಂದ್ರಿಕಾಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡಿದೆ.

ಈ ಬಾರಿ ಕೇರಳ ಪೊಲೀಸ್ ಆಗಿ ಆಯ್ಕೆಗೊಂಡ 74ಮಂದಿ ಬುಡಕಟ್ಟು ಅಭ್ಯರ್ಥಿಗಳ ಪೈಕಿ ಚಂದ್ರಿಕಾ ಕೂಡ ಒಬ್ಬರಾಗಿದ್ದಾರೆ. ಕೇರಳ ಮುಖ್ಯಮಂತ್ರಿಯಿಂದಲೇ ಉದ್ಯೋಗ ನೇಮಕಾತಿ ಪತ್ರ ಪಡೆದಿರುವ ಚಂದ್ರಿಕಾ ಸಾಧನೆಗೆ ಆಕೆಯ ತಾಯಿ ಮತ್ತು ಪತಿ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...