alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಬಿಟ್ಟು ಬ್ಯಾಂಕ್ ಗೆ ಓಡಿದ ವರ

download

ಉತ್ತರ ಪ್ರದೇಶದಲ್ಲಿ ಚಿಲ್ಲರೆ ಪಡೆಯಲು ವರನೇ ಬ್ಯಾಂಕ್ ಗೆ ಬಂದ ಘಟನೆ ನಡೆದಿದೆ. ಮದುವೆಯಲ್ಲಿ ವರನ ಶೂವನ್ನು ಕಳ್ಳತನ ಮಾಡುವ ಸಂಪ್ರದಾಯವಿದೆ. ವಧುವಿನ ತಂಗಿಯಾದವಳು ಶೂ ಅಡಗಿಸಿಡ್ತಾಳೆ. ಆಕೆಗೆ ಹಣ ನೀಡಿ ವರ ಶೂ ಪಡೆದ ನಂತ್ರ ಮದುವೆಯ ಮುಂದಿನ ಪದ್ಧತಿಗಳು ನಡೆಯುತ್ತವೆ.

ಉತ್ತರ ಪ್ರದೇಶದ ಚಂಪಾವತ್ ಬಳಿ ಬುಧವಾರ ಮದುವೆ ತಯಾರಿ ನಡೆದಿತ್ತು. ವರನ ಕಡೆಯವರು ಅದ್ಧೂರಿ ಮೆರವಣಿಗೆಯೊಂದಿಗೆ ಮಂಟಪ ತಲುಪಿದ್ದರು. ಗುರುವಾರ ಬೆಳಿಗ್ಗೆ ಪದ್ಧತಿಯಂತೆ ವಧುವಿನ ತಂಗಿ ವರನ ಶೂ ಅಡಗಿಸಿಟ್ಟಿದ್ದಾಳೆ. ಅದನ್ನು ಪಡೆಯಲು ವರ 500 ರೂಪಾಯಿ ನೋಟು ನೀಡಿದ್ದಾನೆ. ಆದ್ರೆ ಇದನ್ನು ಪಡೆಯಲು ನಾದಿನಿ ಒಪ್ಪಿಲ್ಲ. ಹಾಗಾಗಿ ವರ ಬ್ಯಾಂಕ್ ಗೆ ಓಡಿದ್ದಾನೆ. ಅಲ್ಲಿ ತನ್ನ ಅಳಲು ಹೇಳಿಕೊಂಡು ನೂರು ರೂಪಾಯಿ ನೋಟುಗಳನ್ನು ತಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...