alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹೋಟೆಲ್ ನಲ್ಲಿ ಕಲಾವಿದೆಗಾದ ಅನುಭವ

hyderabad-hot

ಹೈದರಾಬಾದ್: ಹೈದರಾಬಾದ್ ನ ಹೋಟೆಲ್ ನಲ್ಲಿ ಕಲಾವಿದೆಯೊಬ್ಬರಿಗೆ ಆದ ಅನುಭವ ವೈರಲ್ ಆಗಿದ್ದು, ಹೋಟೆಲ್ ನವರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.

ಎನ್.ಆರ್.ಐ. ನೂಪುರ್ ಸಾರಸ್ವತ್ ಕಲಾವಿದೆಯಾಗಿದ್ದು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಗೆ ಆಗಮಿಸಿದ್ದಾರೆ. ಲಗೇಜ್ ಸಮೇತ ಹೋಟೆಲ್ ಗೆ ಹೋದರೆ, ಒಂಟಿಯಾಗಿರುವ ಹೆಣ್ಣುಮಕ್ಕಳಿಗೆ ರೂಂ ಕೊಡಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

ಇದರಿಂದಾಗಿ ಆಕೆ ನಡುರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಬಂದಿದೆ. ತನಗಾದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಸಿಂಗಲ್ ಲೇಡಿ ಆಗಿದ್ದರಿಂದ ರೂಂ ಕೊಡಲ್ಲ ಅಂತಿದಾರೆ. ಹೋಟೆಲ್ ಕೋಣೆಯಲ್ಲಿರುವುದಕ್ಕಿಂತ ರಸ್ತೆಯಲ್ಲೇ ನಿಲ್ಲುವುದು ನನಗೆ ಸೇಫ್ ಎಂದು ಹೋಟೆಲ್ ನವರು ಭಾವಿಸಿದ್ದಾರೆ. ಲಗೇಜ್ ಜಾಸ್ತಿ ಇದೆ. ಎಲ್ಲಿಗೆ ಹೋಗುವುದು ತಿಳಿಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅವರು ಮಾಡಿದ ಪೋಸ್ಟ್ ವೈರಲ್ ಆಗಿದೆ. ಕೊನೆಗೆ ಅವರಿಗೆ ಬೇರೆ ಹೋಟೆಲ್ ನಲ್ಲಿ ರೂಂ ಕೊಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...