alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕನ ವಿರುದ್ಧದ ಆರೋಪ ವಜಾಗೊಳಿಸಿದ ಕೋರ್ಟ್

‘ಹಮ್ಮ ಹಮ್ಮ’ ಮತ್ತು ‘ಜಲ್ವಾ’ ಹಾಡುಗಳ ಖ್ಯಾತಿಯ ಹಿನ್ನಲೆ ಗಾಯಕ ರೆಮೋ ಡಿಸೋಜಾ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ತೀರ್ಪನ್ನು ಗೋವಾ ನ್ಯಾಯಾಲಯ ಪ್ರಕಟಿಸಿದೆ. ರೆಮೋ ಡಿಸೋಜಾ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ವಜಾಗೊಳಿಸಿರುವ ಕೋರ್ಟ್ ಈ ಪ್ರಕರಣದಲ್ಲಿ ರೆಮೋ ಡಿಸೋಜಾ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ.

17 ವರ್ಷದ ಬಾಲಕಿಯನ್ನು ಸಾರ್ವಜನಿಕವಾಗಿ ನಿಂದಿಸಿದ ಆರೋಪದಲ್ಲಿ ರೆಮೋ ಡಿಸೋಜಾ ವಿರುದ್ಧ ಪೊಲೀಸ್ ತನಿಖೆ ಮುಗಿದ ಬಳಿಕ 2016ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ರೆಮೋ ಡಿಸೋಜಾ ಅವರ ಮಗ ಆಕೆಗೆ ಕಾರಿನಿಂದ ಗುದ್ದಿ ಹಲ್ಲೆ ನಡೆಸಿದ ನಂತರದಲ್ಲಿ ಆ ಯುವತಿ ಗೋವಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿದ್ದಳು ಅನ್ನೋ ಆರೋಪವೂ ಕೇಳಿಬಂದಿತ್ತು.

ಡಿಸೆಂಬರ್ 2, 2015 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ 2016 ರ ಡಿಸೆಂಬರ್ ನಲ್ಲಿ ಆ ಬಾಲಕಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಹಾಗಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಆ ಬಾಲಕಿಯ ನಿಂದನೆ ಆರೋಪವನ್ನು ಗೋವಾ ರಾಜಧಾನಿ ಪಣಜಿಯ ಮಕ್ಕಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈಗ ಆ ಪ್ರಕರಣದಲ್ಲಿ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿ ರೆಮೋ ಮೇಲಿನ ಆರೋಪವನ್ನು ವಜಾಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...