alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಧು ಸಾಧನೆಗೆ ಅಭಿನಂದನೆ, ಸಂಭ್ರಮಾಚರಣೆ

sindhu wish_6

ನವದೆಹಲಿ: ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ, ಐತಿಹಾಸಿಕ ಸಾಧನೆಯೊಂದಿಗೆ ಬೆಳ್ಳಿ ಪದಕ ಗಳಿಸಿದ ಭಾರತದ ಹೆಮ್ಮೆಯ ಪುತ್ರಿ ಪಿ.ವಿ.ಸಿಂಧು ಅವರಿಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಸಿಂಧು ಬೆಳ್ಳಿ ಪದಕ ಗಳಿಸಿದ ಹಿನ್ನಲೆಯಲ್ಲಿ ಅವರ ತವರು ಹೈದರಾಬಾದ್, ನಾಗಪುರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಘೋಷಣೆ ಕೂಗಿದ ಕ್ರೀಡಾಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಸಿಂಧೂ ಸಾಧನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿನಂದಿಸಿದ್ದಾರೆ. ದೇಶಕ್ಕೇ ಹೆಮ್ಮೆಯನ್ನು ತಂದಿದ್ದೀರಿ. ನಿಮ್ಮ ಕುಟುಂಬದವರೊಂದಿಗೆ ದೇಶ ಸಂಭ್ರಮ ಪಡುತ್ತಿದೆ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಅಭಿನಂದಿಸಿದ್ದು, ಅತ್ಯುತ್ತಮ ಹೋರಾಟ ನೀಡಿದ ಸಿಂಧುಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಅದೇ ರೀತಿ ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಸಿಂಧು ಐತಿಹಾಸಿಕ ಸಾಧನೆಗೆ ದೇಶದ ಜನ ಸಂಭ್ರಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...