alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿ ಗೂಡಂಗಡಿಯಲ್ಲಿ ಸಿಮ್ ಖರೀದಿ ಮಾಡುವ ಮುನ್ನ ಎಚ್ಚರ!

ರಸ್ತೆ ಅಂಚಿನಲ್ಲಿ ಇರುವ ಸಣ್ಣ ಗೂಡಂಗಡಿಗಳಲ್ಲಿ ಸಿಮ್ ಖರೀದಿ ಮಾಡುತ್ತಿದ್ದರೆ ಎಚ್ಚರ. ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಫಿಂಗರ್ ಫ್ರಿಂಟ್ ನಿಮ್ಮನ್ನೇ ಸಂಕಷ್ಟಕ್ಕೆ ನೂಕಬಹುದು.

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್ ಕಳ್ಳತನ ಮಾಡಿ ಹಣ ದೋಚುವುದು ಹಳೆಯದಾಯ್ತು. ಈಗ ಸಿಮ್ ನೀಡುವ ಹೆಸರಿನಲ್ಲಿ ಆಧಾರ್ ನಂಬರ್ ಹಾಗೂ ಫಿಂಗರ್ ಫ್ರಿಂಟ್ ಪಡೆದು ಮೋಸ ಮಾಡುವ ಜಾಲ ಶುರುವಾಗಿದೆ.

ಕಾನ್ಪುರದಲ್ಲಿ ಜನರಿಗೆ ಮೋಸ ಮಾಡ್ತಿದ್ದ ತಂಡವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಧಿಸಿರುವ ಪೊಲೀಸರು 22 ಮೊಬೈಲ್ ಮತ್ತು 1500 ಸಿಮ್ ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ತಂಡ 3 ಸಾವಿರಕ್ಕೂ ಹೆಚ್ಚು ಜನರನ್ನು ಬೇಟೆಯಾಡಿದೆ.

ವೋಡಾಫೋನ್ ಏಜೆನ್ಸಿ ಪಡೆದಿದ್ದ ಆರೋಪಿ ನಗರದ ಬೇರೆ ಬೇರೆ ಕಡೆ ಅಂಗಡಿ ತೆರೆದಿದ್ದ. ಜನರಿಗೆ ಸಿಮ್ ನೀಡುವ ನೆಪದಲ್ಲಿ ಆಧಾರ್ ನಂಬರ್ ಹಾಗೂ ಫಿಂಗರ್ ಫ್ರಿಂಟ್ ಪಡೆಯುತ್ತಿದ್ದ. ಇದನ್ನು ದಾಖಲೆ ರೂಪದಲ್ಲಿ ನೀಡಿ ಮತ್ತೊಂದು ಸಿಮ್ ಪಡೆಯುವ ಜೊತೆಗೆ ಪೇಟಿಎಂ ಅಕೌಂಟ್ ತೆರೆಯುತ್ತಿದ್ದ. ಗ್ರಾಹಕನ ಖಾತೆಯಿಂದ ಪೇಟಿಎಂಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...