alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನು ಆತಂಕಕ್ಕೀಡು ಮಾಡಿತ್ತು ಆ ಯುವಕನ ಹೇರ್ ಸ್ಟೈಲ್

police 345678ಕೋಮು ಸಾಮರಸ್ಯ ಕದಡಲು ಕೆಲವೊಮ್ಮೆ ಎಂತೆಂತ ಘಟನೆಗಳು ಕಾರಣವಾಗುತ್ತವೆಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. 19 ವರ್ಷದ ಸಿಖ್ ಯುವಕನೊಬ್ಬ ಫ್ಯಾಷನ್ ಗಾಗಿ ತನ್ನ ಕೂದಲು ಕತ್ತರಿಸಿಕೊಂಡಿದ್ದು, ಆದರೆ ಪೋಷಕರ ಭಯದಿಂದ ಹೇಳಿದ ಸುಳ್ಳು, ಆತಂಕ ಸೃಷ್ಟಿಸಿದ್ದ ಘಟನೆ ಮಥುರಾದಲ್ಲಿ ನಡೆದಿದೆ.

19 ವರ್ಷದ ಅಮ್ರಿಕ್ ಸಿಂಗ್ ಎಂಬಾತನ ತಲೆಗೂದಲಿನ ಕುರಿತು ಲೇವಡಿ ಮಾಡಿದ್ದ ಆತನ ಸ್ನೇಹಿತರು, ಈ ಬಿರು ಬಿಸಿಲಿನಲ್ಲಿ ಅಷ್ಟುದ್ದ ಕೂದಲನ್ನು ಏಕೆ ಬಿಟ್ಟುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಇದು ಅಮ್ರಿಕ್ ಸಿಂಗ್ ಗೆ ಸರಿಯೆನಿಸಿದೆ. ಆದರೆ ಸಿಖ್ ಸಂಪ್ರದಾಯದಂತೆ ಕೂದಲಿಗೆ ಕತ್ತರಿ ಹಾಕುವಂತಿಲ್ಲ. ಅಲ್ಲದೇ ಪೇಟಾವನ್ನೂ ಬಿಚ್ಚುವಂತಿಲ್ಲ. ಜೊತೆಗೆ ಆತನ ಪೋಷಕರು ಸ್ಥಳೀಯ ಗುರುದ್ವಾರದ ಸೇವಾಕರ್ತರೂ ಕೂಡಾ ಹೌದು. ಆದರೂ ಧೈರ್ಯ ವಹಿಸಿದ ಆತ, ಸ್ವತಃ ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡಿದ್ದಾನೆ.

ಅದಾದ ಬಳಿಕ ಆತನಿಗೆ ಭಯ ಶುರುವಾಗಿದೆ. ಬೆಳಿಗ್ಗೆ ಎದ್ದವನೇ ತಾನು ಮಹಡಿ ಮೇಲೆ ಮಲಗಿದ್ದಾಗ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ಕು ಮಂದಿ ಬಲವಂತವಾಗಿ ತನ್ನ ಕೂದಲನ್ನು ಕತ್ತರಿಸಿದ್ದಾಗಿ ಪೋಷಕರ ಬಳಿ ಹೇಳಿದ್ದಾನೆ. ಇದನ್ನು ನಿಜವೆಂದೇ ನಂಬಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಷಣಾರ್ಧದಲ್ಲಿ ಈ ಸುದ್ದಿ ಎಲ್ಲೆಡೆ ಹರಡಿದ್ದು, ಬಿಗುವಿನ ವಾತಾವರಣ ಏರ್ಪಟ್ಟಿದೆ. ಇದೆಲ್ಲಿ ಕೋಮು ಗಲಭೆಗೆ ಕಾರಣವಾಗುತ್ತದೋ ಎಂಬ ಆತಂಕಕ್ಕೊಳಗಾದ ಪೊಲೀಸರು ಕೂಡಲೇ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ವಿಚಾರಣೆ ವೇಳೆ ಅಮ್ರಿಕ್ ಸಿಂಗ್ ಪದೇ ಪದೇ ತನ್ನ ಹೇಳಿಕೆ ಬದಲಾಯಿಸುತ್ತಿದ್ದ ಕಾರಣ ಅನುಮಾನಗೊಂಡ ಪೊಲೀಸರು, ನಿಜ ಹೇಳುವಂತೆ ಒತ್ತಡ ಹೇರಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಫ್ಯಾಷನ್ ಗಾಗಿ ತಾನೇ ತಲೆಗೂದಲನ್ನು ಕತ್ತರಿಸಿಕೊಂಡಿದ್ದಾಗಿ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಈಗ ತಾನು ಇನ್ನು ಮುಂದೆ ಹಾಗೆ ಮಾಡುವುದಿಲ್ಲವೆಂದು ಗುರುದ್ವಾರದ ಮುಖ್ಯಸ್ಥರಿಗೂ ಆತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು, ಆದರೆ ಆತನ ಹೇರ್ ಸ್ಟೈಲ್ ಪೊಲೀಸರನ್ನು ಆತಂಕಕ್ಕೆ ತಳ್ಳಿದ್ದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...