alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮು ಸೌಹಾರ್ದತೆಗೆ ಇಲ್ಲಿದೆ ಉತ್ತಮ ಉದಾಹರಣೆ

mulla vilage mosque

ದೇಶದಲ್ಲಿ ಅಸಹಿಷ್ಣುತೆ ಕುರಿತ ವಾದ- ವಿವಾದ ಜೋರಾಗಿ ನಡೆಯುತ್ತಿದೆ. ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿಸಿ ಕೋಮು ಸಾಮರಸ್ಯವನ್ನು ಹಾಳುಗೆಡವಿರುವ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು ಪಂಜಾಬ್ ನಲ್ಲಿ ನಡೆದಿದೆ.

ಪಂಜಾಬ್ ನ ಜಾಗ್ರಾನ್ ಜಿಲ್ಲೆಯ ಮಲ್ಲಾ ಗ್ರಾಮದಲ್ಲಿ ಸಿಖ್ಖರು ಬಹು ಸಂಖ್ಯಾತರಾಗಿದ್ದಾರೆ. ಇಲ್ಲಿನ ಜನಸಂಖ್ಯೆ 5 ಸಾವಿರವಿದ್ದು, ಸಿಖ್ಖರು ಶೇ.90 ರಷ್ಟಿದ್ದರೆ, ಶೇ. 9 ಮಂದಿ ಹಿಂದೂಗಳಿದ್ದಾರೆ. ಒಂದೇ ಒಂದು ಮುಸ್ಲಿಂ ಕುಟುಂಬ ಗ್ರಾಮದಲ್ಲಿ ವಾಸ ಮಾಡುತ್ತಿದೆ.

ಈ ಒಂದು ಕುಟುಂಬದ ಪ್ರಾರ್ಥನೆಗಾಗಿ 1947 ರಲ್ಲಿ ಕುಸಿದು ಬಿದ್ದಿದ್ದ ಮಸೀದಿ ಕಟ್ಟಡವನ್ನು ಗ್ರಾಮಸ್ಥರೆಲ್ಲರೂ ಸೇರಿ ಪುನರ್ ನಿರ್ಮಿಸಿದ್ದಾರೆ. ಇದಕ್ಕಾಗಿ ಕೇವಲ ಹಣವನ್ನಷ್ಟೇ ನೀಡಿಲ್ಲ. ಬದಲಾಗಿ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಗೂಡಿಸಿದ್ದಾರೆ. ಈ ಮಸೀದಿ ಇತ್ತೀಚೆಗೆ ಉದ್ಘಾಟನೆಗೊಂಡ ವೇಳೆ ಇಡೀ ಗ್ರಾಮದ ಜನತೆ ಪಾಲ್ಗೊಂಡು ಕೋಮು ಸಾಮರಸ್ಯವನ್ನು ಮೆರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...