alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗವೈಕಲ್ಯ ಅಡ್ಡಿಯಾಗಲಿಲ್ಲ ಇವರ ಸಾಧನೆಗೆ

krishen and basant

ಅಂಗವೈಕಲ್ಯವಿದ್ದರೂ ಅದಕ್ಕೆ ಎದೆಗುಂದದೆ ಅದನ್ನು ಮೀರಿ ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಹೊಂದಿರುತ್ತಾರೆ ಹಲವರು. ಅಂತವರ ಸಾಲಿಗೆ ಸೇರಿದ್ದಾರೆ ಪೊಲಿಯೋ ಗೆ ತುತ್ತಾಗಿರುವ ಕ್ರಿಶನ್.

ಬಿಹಾರದ ಕೋಟಾದಲ್ಲಿ ನೆಲೆಸಿರುವ ಅತ್ಯಂತ ಬಡ ಕುಟುಂಬದಲ್ಲಿ ಬೆಳೆದ ಕ್ರಿಶನ್, ತಮ್ಮ ಸಹೋದರನ ಸಹಾಯದಿಂದ ಜೆ.ಇ.ಇ. ಪರೀಕ್ಷೆಯಲ್ಲಿ 38 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರತಿಷ್ಠಿತ ಐ.ಐ.ಟಿ. ಕಾಲೇಜುಗಳ ಪ್ರವೇಶಕ್ಕೆ ನಡೆಸುವ ಜೆ.ಇ.ಇ. ಪರೀಕ್ಷೆಯಲ್ಲಿ ಕ್ರಿಶನ್ 38 ನೇ ರ್ಯಾಂಕ್ ಪಡೆದುಕೊಂಡರೆ ಅವರ ಸಹೋದರ ಬಸಂತ್ 3675 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಬಸಂತ್, ತಮ್ಮ ಪೋಲಿಯೋ ಪೀಡಿತ ಸಹೋದರನನ್ನು ಹೆಗಲ ಮೇಲೆ ಹೊತ್ತು ಶಾಲೆ ಮತ್ತು ತರಬೇತಿ ಸಂಸ್ಥೆಗಳಿಗೆ ಕರೆದೊಯ್ಯುತ್ತಿದ್ದರು, ಕ್ರಿಶನ್ ಗೆ ನಡೆದಾಡುವ ಶಕ್ತಿ ಇಲ್ಲದಿದ್ದರೂ ಬಸಂತ್, ಅವರ ಕಾಲುಗಳಾಗಿದ್ದರು. ಎಲ್ಲೇ ಹೋದರೂ ಭುಜದ ಮೇಲೆ ಹೊತ್ತೊಯ್ದು ಸಹಾಯಕರಾಗಿದ್ದರು ಹಾಗೂ ಒಬ್ಬರಿಗೊಬ್ಬರು ಬಿಟ್ಟಿರುತ್ತಿರಲಿಲ್ಲ. ಈ ಸಹೋದರರ ಸಾಧನೆ ಇತರರಿಗೆ ಮಾದರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...