alex Certify
ಕನ್ನಡ ದುನಿಯಾ       Mobile App
       

Kannada Duniya

ಜವರಾಯನನ್ನೇ ಗೆದ್ದು ಬಂದ ಧೀರ ಯೋಧ

hnu siya

ಸಿಯಾಚಿನ್ ಹೆಸರು ಹೇಳುತ್ತಲೇ ನೆನಪಾಗುವುದು ಮೈ ಕೊರೆಯುವ ಚಳಿ. ಸಾವಿನ ಸನಿಹಕ್ಕೆ ಹೋಗಿ ಬಂದಂತಹ ಅನುಭವ. ಇಂತಹ ಸಿಯಾಚಿನ್ ಪ್ರದೇಶದಲ್ಲಿ ಕರ್ನಾಟಕದ ಮೂವರು ಸೇರಿದಂತೆ ಭಾರತೀಯ ಸೇನೆಯ 10 ಕ್ಕೂ ಹೆಚ್ಚು ಮಂದಿ ಯೋಧರು ನಾಪತ್ತೆಯಾಗಿದ್ದರು.

ಅವರನ್ನು ಸೇನಾ ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸಲಾಗಿತ್ತಾದರೂ, ಅವರ ಪತ್ತೆಯಾಗಿರಲಿಲ್ಲ. ಪ್ರಧಾನಿ ಮೋದಿ ಅವರೂ ಕೂಡ ಟ್ವಿಟರ್ ನಲ್ಲಿ ಯೋಧರು ನಾಪತ್ತೆಯಾಗಿರುವುದು ದುಃಖದ ಸಂಗತಿ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಯೋಧರ ಕುಟುಂಬದವರ ಆತಂಕ ಹೆಚ್ಚಾಗಿ ದುಃಖ ಮಡುಗಟ್ಟಿತ್ತು. ಇಂತಹ ಸಂದರ್ಭದಲ್ಲಿ ಖುಷಿಯ ಸುದ್ದಿಯೊಂದು ಬಂದಿದೆ. ಸಿಯಾಚಿನ್ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಧಾರವಾಡದ ಯೋಧ ಹನುಮಂತಪ್ಪ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.

25 ವರ್ಷದ ಯೋಧ ಹನುಮಂತಪ್ಪ ಅವರು ಸಿಯಾಚಿನ್ ನಲ್ಲಿ ಸುಮಾರು 25 ಅಡಿಗಳಷ್ಟು ಹಿಮಪಾತದಲ್ಲಿ ಸಿಲುಕಿದ್ದರು. 6 ದಿನಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಜವರಾಯನನ್ನು ಗೆದ್ದು ಬಂದಿದ್ದಾರೆ. ಮೈನಸ್ 40 ಡಿಗ್ರಿ ಸೆಲ್ಷಿಯಸ್ ಕೊರೆಯುವ ಚಳಿಯಲ್ಲಿ ಅವರು ಸಂಕಷ್ಟದಿಂದ ಪಾರಾಗಿ ಬಂದಿದ್ದು, ಅವರಿಗೆ ಆರ್ಮಿ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...