alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ‘ಶ್ರೀ ಗಣೇಶಾಯ ನಮಃ’

shri

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಈ ಕುಟುಂಬ ಭಾವೈಕ್ಯತೆಗೆ ತಾಜಾ ನಿದರ್ಶನ. ಮುಸ್ಲಿಂ ಕುಟುಂಬವೊಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂಗಳ ಧಾರ್ಮಿಕ ಶ್ಲೋಕ ಮತ್ತು ಗುರುತುಗಳನ್ನು ಬಳಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿದೆ.

ಈ ವೆಡ್ಡಿಂಗ್ ಕಾರ್ಡ್ ಮೇಲೆ ಶ್ರೀ ಗಣೇಶಾಯ ನಮಃ ಎಂಬ ಬರಹವಿದೆ. ಪಿಂಡಾರಿ ಗ್ರಾಮದ ನಸ್ರುಲ್ಲಾ ಎಂಬುವವರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಈ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದಾರೆ. ಅವರ ಸಹೋದರ ಸೆರಾಜುದ್ದೀನ್ ನಿಖಾ ರಿಜ್ವಾನಾ ಎಂಬ ಯುವತಿಯ ಜೊತೆ ನೆರವೇರಿದ್ದು, ಇದು ಆರತಕ್ಷತೆಯ ಆಹ್ವಾನ ಪತ್ರಿಕೆ.

‘ಮಂಗಲಂ ಭಗವಾನ್ ವಿಷ್ಣು, ಮಂಗಲಂ ಗರುಡಧ್ವಜ. ಮಂಗಲಂ ಪುಂಡರೀಕಾಕ್ಷ, ಮಂಗಲಾಯ ತನೋ ಹರಿ’ ಎಂಬ ಸಾಲುಗಳನ್ನು ಕೂಡ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಕಲಶ ಹಾಗೂ ಸ್ವಸ್ಥಿಕ್ ಚಿಹ್ನೆಗಳಿವೆ. ತಮ್ಮ ಹಿಂದೂ ಸ್ನೇಹಿತರಿಗಾಗಿ ಈ ಕಾರ್ಡ್ ಗಳನ್ನು ಮುದ್ರಿಸಿರುವುದಾಗಿ ನಸ್ರುಲ್ಲಾ ಹೇಳಿದ್ದಾರೆ. ಸಹಬಾಳ್ವೆಯಲ್ಲಿ ತಾವು ನಂಬಿಕೆ ಇಟ್ಟುಕೊಂಡಿದ್ದು, ಅದರಲ್ಲೇನೂ ತಪ್ಪಿಲ್ಲ ಎಂದಿದ್ದಾರೆ.

ಸಂಬಂಧಿಕರಿಗಾಗಿ ಮುಸಲ್ಮಾನ್ ಶೈಲಿಯ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಹಾಗಂತ ಹಿಂದೂ ಬರಹ ಮತ್ತು ದೇವರನಾಮಗಳಿರುವ ಕಾರ್ಡ್ ಗಳನ್ನು ಮುಸಲ್ಮಾನರಿಗೆ ಕೊಟ್ಟಿಲ್ಲ ಎಂದರ್ಥವಲ್ಲ. ಅವರಿಗೆ ಕೂಡ ಹಿಂದೂ ಬರಹಗಳಿರುವ ಆಹ್ವಾನ ಪತ್ರಿಕೆ ನೀಡಲಾಗಿದ್ದು, ಯಾರೂ ಈ ಬಗ್ಗೆ ಆಕ್ಷೇಪ ಎತ್ತಿಲ್ಲ. ವಿಶೇಷ ಅಂದ್ರೆ ಪಿಂಡಾರಿ ಗ್ರಾಮದಲ್ಲಿ ಕೇವಲ 7 ಮುಸ್ಲಿಂ ಕುಟುಂಬಗಳಿದ್ದು, ಎಲ್ಲಾ ಧರ್ಮದವರು ಒಂದಾಗಿ ಬಾಳುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...