alex Certify
ಕನ್ನಡ ದುನಿಯಾ       Mobile App
       

Kannada Duniya

ಕಸದ ರಾಶಿಯಲ್ಲಿ ಸಿಕ್ತು ಕತ್ತರಿಸಿದ ಬಲ ಕಾಲು

ಹರ್ಯಾಣದ ಗುರ್ಗಾಂವ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸದರ್ ಬಜಾರ್ ಬಳಿಯ ಕಸದ ರಾಶಿಯಲ್ಲಿ ಕತ್ತರಿಸಿದ ಕಾಲೊಂದು ಸಿಕ್ಕಿದೆ. ಕಾಲನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಕತ್ತರಿಸಲ್ಪಟ್ಟ ಕಾಲು ಯಾರದ್ದು? ಯಾರು ಈ ಕೃತ್ಯವೆಸಗಿದ್ದಾರೆನ್ನುವ ಬಗ್ಗೆ ಪೊಲೀಸರು ಬೇರೆ ಬೇರೆ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಬಲಗಾಲನ್ನು ಕತ್ತರಿಸಿ ಕಸಕ್ಕೆ ಎಸೆಯಲಾಗಿದೆ. ಈಗಷ್ಟೇ ಕತ್ತರಿಸಿ ಕಾಲನ್ನು ಕಸಕ್ಕೆ ಎಸೆದಿದ್ದಾರೆಂದು ಪೊಲೀಸರು ಅಂದಾಜಿಸಿದ್ದಾರೆ.

ಕಸದ ರಾಶಿಯಲ್ಲಿ ಕಾಲು ನೋಡಿ ಸ್ಥಳೀಯರು ದಂಗಾಗಿದ್ದರು. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸುತ್ತಮುತ್ತಲ ಸಿಸಿ ಟಿವಿ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಂತ್ರ ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...