alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಕಾರ್ಡ್ ತೋರಿಸಿದ್ರೆ ಶೌಚಾಲಯ ಗಿಫ್ಟ್

ಉತ್ತರ ಪ್ರದೇಶದ ಸಂತಕಬೀರನಗರ ಜಿಲ್ಲಾಡಳಿತ ಸ್ವಚ್ಛತೆ ಅಭಿಯಾನದಡಿ ಅನನ್ಯ ಯೋಜನೆಯೊಂದನ್ನು ಶುರು ಮಾಡಿದೆ. ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ವಿಭಿನ್ನ ಯೋಜನೆ ಶುರುಮಾಡಿದೆ. ಮದುವೆಯಾಗುವ ಹೊಸ ಜೋಡಿಗೆ ಒಂದು ಶೌಚಾಲಯವನ್ನು ಜಿಲ್ಲಾಡಳಿತ ಉಚಿತವಾಗಿ ನೀಡ್ತಾಯಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ರ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಯೋಜನೆ ಶುರುಮಾಡಿದೆ. ಮದುವೆಯಾದ ದಂಪತಿಗೆ ಜಿಲ್ಲಾಡಳಿತ ಉಡುಗೊರೆ ರೂಪದಲ್ಲಿ ಶೌಚಾಲಯವನ್ನು ನೀಡ್ತಾಯಿದೆ.

ಮದುವೆ ಕಾರ್ಡ್ ತೋರಿಸಿ ಶೌಚಾಲಯ ಮನೆಗೆ ತೆಗೆದುಕೊಂಡು ಹೋಗಿ ಶೀರ್ಷಿಕೆಯಡಿ ಈ ಯೋಜನೆ ಶುರುಮಾಡಲಾಗಿದೆ. ಜಿಲ್ಲಾಡಳಿತದ ಈ ಯೋಜನೆ ಗ್ರಾಮದ ಮಹಿಳೆಯರ ಖುಷಿಗೆ ಕಾರಣವಾಗಿದೆ. ಈ ಯೋಜನೆಯಿಂದ ಬಯಲು ಶೌಚಾಲಯಕ್ಕೆ ಮುಕ್ತಿ ಸಿಗಲಿದೆ. ರೋಗಗಳು ಕಡಿಮೆಯಾಗಲಿವೆ ಎನ್ನುತ್ತಿದ್ದಾರೆ ಮಹಿಳೆಯರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...