alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾಗುವಂತಿದೆ ಈ ಮದುವೆ ಮುರಿದುಬಿದ್ದ ಕಾರಣ

marriage 28

ಮಥುರಾ: ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಸ್ವರ್ಗದಲ್ಲಿರಲಿ, ಇಲ್ಲಿಯೇ ನಿಶ್ಚಯವಾದ ಎಷ್ಟೋ ಮದುವೆಗಳು ಮುರಿದುಬಿದ್ದ ಉದಾಹರಣೆಗಳಿವೆ. ಮದುವೆ ಮಂಟಪದಲ್ಲಿಯೇ ಮದುವೆ ನಿಂತುಹೋದ ಘಟನೆಗಳ ಬಗ್ಗೆ ನೋಡಿರುತ್ತೀರಿ.

ಇತ್ತೀಚೆಗಷ್ಟೇ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ವಧು ಮದುವೆ ನಿಲ್ಲಿಸಲಾಗಿತ್ತು. ಅಲ್ಲದೇ, ವರರಿಗೆ ವಯಸ್ಸಾಗಿದ್ದು, ನೋಡಲು ಕಪ್ಪಾಗಿದ್ದಾರೆ ಎಂದು ಸಹೋದರಿಯರು ಮದುವೆ ನಿಲ್ಲಿಸಿದ್ದರು. ಇಲ್ಲಿ ಮದುವೆ ಮುರಿದುಬಿದ್ದಿರುವುದು ಐಸ್ ಕ್ರೀಂ ಕಾರಣಕ್ಕೆ. ಉತ್ತರ ಪ್ರದೇಶದ ಮಥುರಾದ ರಾಯ್ ಸದಬಾದ್ ಎಂಬಲ್ಲಿ ಮದುವೆ ಸಮಾರಂಭವೊಂದು ಆಯೋಜನೆಗೊಂಡಿದ್ದು, ಸಂಭ್ರಮ ಸಡಗರ ಮನೆ ಮಾಡಿತ್ತು. ವಧುವಿನ ಮನೆಯವರು ಮದುವೆ ಸಮಾರಂಭ ಆಯೋಜಿಸಿದ್ದರು.

ವರನ ಮನೆಯವರು ಕೂಡ ಆಗಮಿಸಿದ್ದು, ಊಟದ ಸಂದರ್ಭದಲ್ಲಿ ಐಸ್ ಕ್ರೀಂ ಖಾಲಿಯಾಗಿದೆ. ವರನ ಕಡೆಯವರಿಗೆ ಐಸ್ ಕ್ರೀಂ ಇಲ್ಲದ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಜಗಳವಾಗಿದ್ದು, ಮದುವೆ ಮನೆ ರಣಾಂಗಣವಾಗಿದೆ. ಕೊನೆಗೆ ಪೊಲೀಸರು, ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇಷ್ಟೆಲ್ಲಾ ಆದ ನಂತರ ಮದುವೆಯೇ ನಿಂತಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...