alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಅಂತ್ಯಸಂಸ್ಕಾರಕ್ಕೆ ಅಡ್ಡಿಯಾಯ್ತು 500 ರ ನೋಟು

br-9

ಮೋದಿ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇಂದು ನೋಟು ಬದಲಾವಣೆಗೆ ಅವಕಾಶವಿದೆ. ಇಂದಿನಿಂದ ಬ್ಯಾಂಕ್ ಗಳು ಬಾಗಿಲು ತೆರೆದಿವೆ. ಆದ್ರೆ ನಿನ್ನೆ ಯಾವುದೇ ಬ್ಯಾಂಕ್ ಕೆಲಸ ಮಾಡಿಲ್ಲ. ಹಾಗಾಗಿ ಬರೀ 500 ಹಾಗೂ ಸಾವಿರ ಮುಖಬೆಲೆಯ ನೋಟು ಹೊಂದಿದ್ದ ಸಾಮಾನ್ಯ ಜನರು ಸಾಕಷ್ಟು ಪರಿತಪಿಸಿದ್ದಾರೆ.

ದಿನಸಿ ತೆಗೆದುಕೊಳ್ಳುವುದಿರಲಿ ಮೃತ ತಾಯಿಯ ಅಂತ್ಯಸಂಸ್ಕಾರಕ್ಕೆ ಶವಪೆಟ್ಟಿಗೆ ಖರೀದಿಸಲಾಗದೆ ವ್ಯಕ್ತಿಯೊಬ್ಬ ಪರದಾಡಿದ ಘಟನೆ ನಡೆದಿದೆ. ಬಿಹಾರದ ಮದೀಪುರದಲ್ಲಿ ಘಟನೆ ನಡೆದಿದೆ. ಎನಾಲ್ಡ್ ಎಂಬಾತನ ತಾಯಿ ಸಾವನ್ನಪ್ಪಿದ್ದರು. ತಾಯಿ ಅಂತ್ಯಸಂಸ್ಕಾರಕ್ಕೆ ಶವಪೆಟ್ಟಿಗೆ ಬೇಕಾಗಿತ್ತು. ಆದ್ರೆ ಎನಾಲ್ಡ್ ಬಳಿ ಕೇವಲ 500 ಹಾಗೂ ಸಾವಿರದ ನೋಟುಗಳಿದ್ದವು. ಇದರಿಂದಾಗಿ ಎನಾಲ್ಡ್ ಸಾಕಷ್ಟು ತೊಂದರೆ ಅನುಭವಿಸಬೇಕಾಯ್ತು.

ಯಾವ ಅಂಗಡಿಗೆ ಹೋದ್ರೂ 500 ಹಾಗೂ ಸಾವಿರದ ನೋಟನ್ನು ತೆಗೆದುಕೊಳ್ಳುತ್ತಿಲ್ಲ. ಚಿಲ್ಲರೆಗಾಗಿ ಎನಾಲ್ಡ್ ಮನೆ ಮನೆ ಸುತ್ತಿದ್ದಾರೆ. ಮಧ್ಯಾಹ್ನದ ನಂತ್ರ ಸ್ಥಳೀಯ ಕೌನ್ಸಿಲರ್ ಪತ್ನಿ ಎನಾಲ್ಡ್ ಗೆ ಹಣ ನೀಡಿದ್ದಾರೆ. ನಂತ್ರ ಎನಾಲ್ಡ್ ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...