alex Certify
ಕನ್ನಡ ದುನಿಯಾ       Mobile App
       

Kannada Duniya

ರೇಷನ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವೃದ್ಧೆಯನ್ನು ಹೊಡೆದು ಸಾಯಿಸಿದ್ರು

ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ವೃದ್ಧೆಯೊಬ್ಬಳನ್ನು ಹೊಡೆದು ಹೊಡೆದು ಕೊಲೆ ಮಾಡಲಾಗಿದೆ. ಪಡಿತರ ಮಾರಾಟಗಾರ ಕಡಿಮೆ ರೇಷನ್ ನೀಡಿದ್ದನ್ನು ಪ್ರಶ್ನಿಸಿದ್ದೇ ಇದಕ್ಕೆ ಕಾರಣವಾಗಿದೆ.

ಮುಜಾಫರ್ನಗರದ ಫರ್ಜಾಬಾದ್ ನಲ್ಲಿ ಘಟನೆ ನಡೆದಿದೆ. 75 ವರ್ಷದ ವೃದ್ಧೆ ಪಡಿತರ ಕೇಳಲು ಅಂಗಡಿಗೆ ಹೋಗಿದ್ದಾಳೆ. ಅಲ್ಲಿ ಕಡಿಮೆ ಪಡಿತರ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದೆ.

ಅಂಗಡಿ ಮಾಲೀಕ ವೃದ್ಧೆಯನ್ನು ಹೊಡೆದು ಕೊಲೆ ಮಾಡಿದ್ದಾನೆ. ನಾಲ್ವರ ವಿರುದ್ಧ ವೃದ್ಧೆ ಮಗ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಆದ್ರೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...