alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಆಫರ್ !!

kan poster

ನವದೆಹಲಿ: ಬಿಜೆಪಿ ಯುವ ಮೋರ್ಚಾ ಮುಖಂಡರೊಬ್ಬರು ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮುಖಂಡ ಕನ್ಹಯ್ಯ ಕುಮಾರ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿ ವಿವಾದಕ್ಕೆ ಕಾರಣವಾಗಿದ್ದಾಯ್ತು. ಇದೀಗ ಮತ್ತೊಂದು ಆಫರ್ ನೀಡಲಾಗಿದೆ.

ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿ ಬಿಡುಗಡೆಯಾಗಿರುವ ಕನ್ಹಯ್ಯ ಕುಮಾರ್ ಅವರನ್ನು ಹತ್ಯೆಗೈದವರಿಗೆ 11 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುವುದು ಎಂದು ಸಂಘಟನೆಯೊಂದರ ಹೆಸರಿನಲ್ಲಿ ದೆಹಲಿಯ ಹಲವು ಸ್ಥಳಗಳಲ್ಲಿ ಪೋಸ್ಟರ್ ಹಚ್ಚಲಾಗಿದೆ. ಪೂರ್ವಾಂಚಲ ಸಂಘಟನೆಯ ಅಧ್ಯಕ್ಷ ಆದರ್ಶ್ ಶರ್ಮ ಎಂಬುವವರ ಹೆಸರಿನಲ್ಲಿ ಪೋಸ್ಟರ್ ಹಚ್ಚಲಾಗಿದೆ. ಈ ಸಂಘಟನೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜನಪರ ಹೋರಾಟಗಳನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.

ನಮ್ಮ ಸಂಘಟನೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪು ಬರಲು ವಿಳಂಬವಾಗುತ್ತದೆ. ನಮಗೆ ಶೀಘ್ರವಾಗಿ ನ್ಯಾಯಬೇಕಿದೆ. ಹಾಗಾಗಿ, ಕನ್ಹಯ್ಯ ಕುಮಾರ್ ಅವರನ್ನು ಹತ್ಯೆ ಮಾಡಿದರೆ 11 ಲಕ್ಷ ರೂ. ಕೊಡುವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...