alex Certify
ಕನ್ನಡ ದುನಿಯಾ       Mobile App
       

Kannada Duniya

‘ಸ್ವಚ್ಚತಾ ಆಂದೋಲನ’ ಕ್ಕಾಗಿ ಅಬ್ಬರಿಸಿದ್ದಾನೆ ಗಬ್ಬರ್

sholays-gabbar-re-emerges-with-a-clean-imageಅಮಿತಾಬ್ ಬಚ್ಚನ್, ಧರ್ಮೆಂದ್ರ, ಹೇಮಾಮಾಲಿನಿ, ಜಯಾಬಾಧುರಿ, ಅಮ್ಜದ್ ಖಾನ್, ಸಂಜೀವ್ ಕುಮಾರ್ ಮೊದಲಾದವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಶೋಲೆ’ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತಲ್ಲದೇ ಅದರಲ್ಲಿ ಗಬ್ಬರ್ ಸಿಂಗ್ ಪಾತ್ರ ನಿರ್ವಹಿಸಿದ್ದ ಅಮ್ಜದ್ ಖಾನ್ ಅವರ ಡೈಲಾಗ್ ಗಳು ಭಾರೀ ಜನಪ್ರಿಯಗೊಂಡಿದ್ದವು.

ಈಗ ಪೂರ್ವ ರೈಲ್ವೇಯ ಹೌರಾ ವಿಭಾಗ ‘ಶೋಲೆ’ ಚಿತ್ರದ ಡೈಲಾಗ್ ನ್ನು ರೈಲು ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡಲು ಬಳಸಿಕೊಂಡಿದೆ. ಚಿತ್ರದಲ್ಲಿ ಗಬ್ಬರ್ ಸಿಂಗ್ ನನ್ನು ಹಿಡಿದುಕೊಟ್ಟವರಿಗೆ ಸರ್ಕಾರ 50 ಸಾವಿರ ರೂ. ಇನಾಮು ಘೋಷಿಸಿದ್ದು, ಗಬ್ಬರ್ ಸಿಂಗ್ ತನ್ನ ಸಹಚರ ಸಾಂಬಾನ ಬಳಿ ಕೇಳಿದಾಗ ಆತ ‘ಪೂರೇ 50 ಹಜಾರ್’ ಎನ್ನುತ್ತಾನೆ. ಅದೇ ರೀತಿ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿರುವ ಪೋಸ್ಟರ್ ಗಳಲ್ಲಿ ಕಂಡ ಕಂಡಲ್ಲಿ ಗಲೀಜು ಮಾಡುವವರಿಗೆ ಸರ್ಕಾರ ವಿಧಿಸುವ ಜುಲ್ಮಾನೆ ಎಷ್ಟು ಎಂದು ಗಬ್ಬರ್ ಸಿಂಗ್ ಕೇಳುವಂತಿದ್ದು, ಕೆಳಗಡೆ ‘ಪೂರೇ 500’ ಎಂದು ಸಾಂಬಾ ಹೇಳಿದಂತೆ ಬರೆಯಲಾಗಿದೆ.

ಅದೇ ರೀತಿ ಅಮಿತಾಬ್ ಬಚ್ಚನ್, ಶಶಿಕಪೂರ್ ಅಭಿನಯದ ‘ದೀವಾರ್’ ಚಿತ್ರದ ಡೈಲಾಗ್ ‘ಮೇರೇ ಪಾಸ್ ಮಾ ಹೈ’ ಅನ್ನು ಸ್ವಚ್ಚತಾ ಆಂದೋಲನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ರಾಜೇಶ್ ಖನ್ನಾ ಅವರ ಚಿತ್ರವೊಂದರ ಡೈಲಾಗ್ ಅನ್ನು ರೈಲ್ವೇ ಇಲಾಖೆ ಬಳಸಿಕೊಂಡಿದ್ದು, ಇಲಾಖೆಯ ಈ ಐಡಿಯಾ ವರ್ಕೌಟ್ ಆಗ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...