alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ವಿಡಿಯೋ: ರೈಲಿಂದ ಇಳಿಯುವಾಗಲೇ ಕಾದಿತ್ತು ದುರ್ವಿಧಿ

rail ladies

ಕೆಲವರು ಸಿಕ್ಕಾಪಟ್ಟೆ ಅವಸರದ ಸ್ವಭಾವದವರಿರುತ್ತಾರೆ. ಬಸ್, ರೈಲು ಇನ್ನೂ ನಿಂತೇ ಇರಲ್ಲ, ಆಗಲೇ, ನೆಲದ ಮೇಲೆ ಕಾಲಿಟ್ಟು ಇಳಿಯಲು ಪ್ರಯತ್ನಿಸುತ್ತಾರೆ. ಇಂತಹ ಪ್ರಯತ್ನದಲ್ಲಿ ಕೆಲವೊಮ್ಮೆ ಅಪಾಯವನ್ನೂ ತಂದುಕೊಳ್ಳುತ್ತಾರೆ. ಕೆಲವೊಮ್ಮೆ ಜೀವವನ್ನೇ ಕಳೆದುಕೊಂಡ ಉದಾಹರಣೆ ಇದೆ.

ಮುಂಬೈನ ಬೊರಿವಿಲಿಯಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ರೈಲು ನಿಲ್ದಾಣದಲ್ಲಿ ನಿಲ್ಲುವ ಮೊದಲೇ ಇಳಿಯಲು ಹೋಗಿ ಯಡವಟ್ಟಾಗಿದ್ದು, ರೈಲಿಗೆ ಸಿಲುಕಿ ಮಹಿಳೆಯೊಬ್ಬರು ದುರಂತ ಸಾವು ಕಂಡಿದ್ದಾರೆ. ರೈಲು ಸ್ಲೋ ಆಗುತ್ತಿದ್ದಂತೆ ಯುವತಿಯೊಬ್ಬಳು ರೈಲು ಸಾಗುತ್ತಿದ್ದ ವಿರುದ್ಧ ದಿಕ್ಕಿಗೆ ಮುಖ ಮಾಡಿ ಇಳಿಯಲು ಹೋಗಿ ಮುಗ್ಗರಿಸಿದ್ದಾಳೆ. ಆ ನಂತರ ಯುವಕನೊಬ್ಬ ತನ್ನ ಲಗೇಜ್ ಕೆಳಗೆ ಹಾಕಿ ಇಳಿಯುತ್ತಾನೆ, ಚಲಿಸುತ್ತಿದ್ದ ರೈಲಿನಲ್ಲಿ ಉಳಿದಿದ್ದ ಲಗೇಜ್ ತೆಗೆದುಕೊಳ್ಳಲು ಯತ್ನಿಸುತ್ತಾ ರೈಲಿನೊಂದಿಗೆ ಓಡುತ್ತಾನೆ.

ಈ ಸಂದರ್ಭದಲ್ಲಿಯೇ ಕಿರಣಾ ದೇವಿ ಕೊಟಾರಿ ಎಂಬ ಮಹಿಳೆ ರೈಲಿನಿಂದ ಧುಮುಕುತ್ತಾರೆ. ರೈಲು ಚಲಿಸುತ್ತಿದ್ದ ಕಾರಣ ಮೊದಲೇ ಇಳಿದಿದ್ದ ತಮ್ಮ ಮಗನಿಗೆ ಡಿಕ್ಕಿಹೊಡೆದು ಕೆಳಗೆ ಬೀಳುತ್ತಾರೆ. ಚಲಿಸುತ್ತಿದ್ದ ರೈಲು ಅವರನ್ನು ಎಳೆದುಕೊಂಡು ಬಿಡುತ್ತದೆ. ಅಲ್ಲಿಯೇ ಸಾವನ್ನಪ್ಪುತ್ತಾರೆ. ಆ ಯುವಕ ತನ್ನ ತಾಯಿಯನ್ನು ರಕ್ಷಿಸಲು ಏನೆಲ್ಲಾ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಈ ಎಲ್ಲಾ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...