alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಶಾಲೆಯ ”ಶಾಕಿಂಗ್” ವಿಡಿಯೋ ವೈರಲ್

ಶಾಲೆ, ಮಕ್ಕಳ ದೇವಸ್ಥಾನವಾಗಬೇಕು. ಮಕ್ಕಳಿಗೆ ಒಳ್ಳೆ ವಿದ್ಯಾ ಬುದ್ದಿ ಕಲಿಸುವ ಗುರು ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಬೇಕು. ಆದ್ರೆ ದೆಹಲಿ ಸರ್ಕಾರಿ ಶಾಲೆ ಶಿಕ್ಷಕರು ಮಾಡುವ ಕೆಲಸ ತಲೆತಗ್ಗಿಸುವಂತಿದೆ.

ದೆಹಲಿ ಸರ್ಕಾರಿ ಶಾಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಕ್ಷಕ ಕೊಠಡಿಯ ಕುರ್ಚಿ ಮೇಲೆ ಕುಳಿತಿದ್ದಾನೆ. ಆತನ ಮುಂದೆ ಮಕ್ಕಳು ಕುಳಿತಿದ್ದಾರೆ. ಆದ್ರೆ ಶಿಕ್ಷಕ ಮಕ್ಕಳಿಗೆ ಪಾಠ ಹೇಳ್ತಿಲ್ಲ. ವಿಶ್ರಾಂತಿ ತೆಗೆದುಕೊಳ್ತಿದ್ದಾನೆ. ಒಬ್ಬ ವಿದ್ಯಾರ್ಥಿ ಶಿಕ್ಷಕನ ತಲೆ ಮಸಾಜ್ ಮಾಡ್ತಿದ್ದಾನೆ.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ದೇಶದಲ್ಲಿಯೇ ದೆಹಲಿ ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿವೆ. ಉತ್ತಮ ಶಿಕ್ಷಣ ಸಿಗ್ತಿದೆ ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ವಿಡಿಯೋ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...