alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ರೈಲಿನಲ್ಲೇ ಮಗು ಹೆತ್ತ ಅಪ್ರಾಪ್ತೆ

Delhi-metro

ನವದೆಹಲಿ: ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಪಾತ ಮಾಡಿಸಿಕೊಳ್ಳಲು ಮೆಟ್ರೋ ರೈಲಿನಲ್ಲಿ ತೆರಳುತ್ತಿದ್ದ ವೇಳೆಯೇ ರೈಲಿನ ಟಾಯ್ಲೆಟ್ ಬಳಿ ಸತ್ತ ಮಗುವನ್ನು ಹೆತ್ತ ಘಟನೆ ನಡೆದಿದೆ.

ನವದೆಹಲಿಯ ಕೇಶವ್ ಪುರಂ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಕೆಲಸ ಕೊಡಿಸುವ ಆಮಿಷವೊಡ್ಡಿ ಗುಲ್ಶನ್ ಎಂಬಾತ 6 ತಿಂಗಳ ಹಿಂದೆ ಈ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದನೆಂದು ಹೇಳಲಾಗಿದೆ.

ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಿಸಲೆಂದು ಗುಲ್ಶನ್ ಆಕೆಯನ್ನು ಮೆಟ್ರೋ ರೈಲಿನಲ್ಲಿ ಕರೆದುಕೊಂಡು ಹೋಗುತ್ತಿರುವ ವೇಳೆ ಬಾಲಕಿ ತೀವ್ರ ಹೊಟ್ಟೆ ನೋವು ತಾಳಲಾರದೇ ಇನ್ನೂ ಭ್ರೂಣವಸ್ಥೆಯಲ್ಲಿದ್ದ ಸತ್ತ ಮಗುವನ್ನು ಹೆತ್ತಿದ್ದಾಳೆ. ಪೊಲೀಸರು ಇದೀಗ ಗುಲ್ಶನ್ ನನ್ನು ಬಂಧಿಸಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...