alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಮನೆಯಲ್ಲಿದ್ವು 150 ಕ್ಕೂ ಅಧಿಕ ಹಾವುಗಳು !

snakes in houseಆ ಮನೆಯಲ್ಲಿ ಮಲಗಿದ್ದವರು ಎಚ್ಚರಗೊಂಡ ವೇಳೆ ಕಂಡುಬಂದ ದೃಶ್ಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ಸುಮಾರು 150 ಕ್ಕೂ ಅಧಿಕ ಹಾವುಗಳು ಮನೆಯಲ್ಲಿ ಹರಿದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ.

ಹೌದು. ಇಂತದೊಂದು ಘಟನೆ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಮೇ 8 ರ ಭಾನುವಾರ ರಾತ್ರಿ ಮನೆಯ ಬೇಸ್ ಮೆಂಟ್ ಪಕ್ಕದ ಗೋಡೆಯ ಬಿರುಕಿನಿಂದ ಈ ಹಾವುಗಳು ಒಳ ಪ್ರವೇಶಿಸಿರಬಹುದೆಂದು ಹೇಳಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞರು, ಅವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸನಿಹದಲ್ಲಿ ವಾಸಿಸುತ್ತಿದ್ದ ಈ ಹಾವುಗಳು ರಾತ್ರಿ ವೇಳೆ ಮನೆಯ ಗೋಡೆ ಬಳಿ ಇದ್ದ ಸಣ್ಣ ಬಿರುಕಿನ ಮೂಲಕ ಒಳ ಪ್ರವೇಶಿಸಿವೆ ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಆರ್.ಕೆ. ರಾಯ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...