alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣ ರಕ್ಷಣೆಗೆ ಮೊರೆಯಿಡುತ್ತಲೇ ಸಾವನ್ನಪ್ಪಿದ ಚಾಲಕ

inside_carಕೋಲ್ಕತ್ತಾದ ವಿವೇಕಾನಂದ ನಗರದ ಬಳಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ನಡೆದಿದ್ದು, ಈ ಮಧ್ಯೆ ಅಂದು ನಡೆದ ದುರಂತದ ಕರುಣಾಜನಕ ಕಥೆಗಳು ಒಂದೊಂದಾಗಿ ಹೊರ ಬರುತ್ತಿವೆ.

ಈ ಫ್ಲೈ ಓವರ್ ಕೆಳಗೆ ತನ್ನ ಟ್ಯಾಕ್ಸಿ ನಿಲ್ಲಿಸಿಕೊಂಡಿದ್ದ ಚಾಲಕನೊಬ್ಬ,ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ ಕಾರು ನಜ್ಜುಗುಜ್ಜಾಗಿ ಅದರೊಳಗೆ ಸಿಲುಕಿಕೊಂಡಿದ್ದಾನೆ. ರಕ್ಷಣಾ ತಂಡದವರು ಕಾರ್ಯಾಚರಣೆ ನಡೆಸುವ ವೇಳೆ ‘ಅಣ್ಣಾ ನನ್ನನ್ನು ರಕ್ಷಿಸಿ’ ಎಂದು ಆರ್ತನಾದಗೈಯುತ್ತಿದ್ದು, ಆತನ ರಕ್ಷಣೆಗೆ ತಕ್ಷಣವೇ ಧಾವಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಆತ ರಕ್ಷಣೆಗೆ ಮೊರೆಯಿಡುತ್ತಲೇ ನೋಡ ನೋಡುತ್ತಿದ್ದಂತೆಯೇ ಸಾವನ್ನಪ್ಪಿದ್ದಾನೆ. ಇಂತಹುದೇ ಕಥೆ ಅಲ್ಲಿ ಸಾವನ್ನಪ್ಪಿದ ಬಹುತೇಕರದ್ದಾಗಿದೆ. ಫ್ಲೈ ಓವರ್ ನಿರ್ಮಾಣವಾಗುತ್ತಿದ್ದ ಕಾರಣ, ಜೀವನೋಪಾಯಕ್ಕಾಗಿ ಅದರ ಕೆಳಗಡೆ ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದವರು ಕ್ಷಣಾರ್ಧದಲ್ಲೇ ಇಹ ಲೋಕ ತ್ಯಜಿಸಿದ್ದಾರೆ. ಗುತ್ತಿಗೆ ಪಡೆದಿದ್ದ ನಿರ್ಮಾಣ ಸಂಸ್ಥೆಯ ಕಳಪೆ ಕಾಮಗಾರಿಯೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದ್ದು, ಅವರ ದುರಾಸೆಗೆ ಅಮಾಯಕ ಜನ ಬಲಿಯಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...