alex Certify
ಕನ್ನಡ ದುನಿಯಾ       Mobile App
       

Kannada Duniya

ಭಗ್ನ ಪ್ರೇಮಿಯಿಂದ ಒತ್ತೆಯಾಳಾಗಿದ್ದ ಮಾಡೆಲ್ ಬಚಾವಾಗಿದ್ದೇಗೆ ಗೊತ್ತಾ?

ಭಗ್ನಪ್ರೇಮಿಯಿಂದ ತನ್ನ ಮನೆಯಲ್ಲಿಯೇ ಒತ್ತೆಯಾಳಾಗಿದ್ದ 30 ವರ್ಷದ ಮಾಡೆಲ್, 12 ಗಂಟೆಗಳ ಕಾಲದ ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾಳೆ.

ಭೋಪಾಲ್ ನಲ್ಲಿ ಈ ಘಟನೆ ನಡೆದಿದ್ದು ರೋಹಿತ್ ಎಂಬಾತ ಮಿಸ್ರೋದ್ ಏರಿಯಾದಲ್ಲಿರುವ ಮಾಡೆಲ್ ಮನೆಗೆ ಶುಕ್ರವಾರ ಬೆಳಗ್ಗೆ ಗನ್ ಸಮೇತ ನುಗ್ಗಿದ್ದಲ್ಲದೆ ತನ್ನನ್ನು ಈಗಲೇ ವಿವಾಹವಾಗುವಂತೆ ಒತ್ತಡ ಹೇರತೊಡಗಿದ್ದ.

ಮಾಡೆಲ್ ಅಪಾರ್ಟ್ ಮೆಂಟ್ ನಿಂದ ಕೇಳಿಬರುತ್ತಿದ್ದ ಗದ್ದಲ ಇತರೆ ನಿವಾಸಿಗಳ ಗಮನ ಸೆಳೆದಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಒಳ ಬರಲು ಯತ್ನಿಸಿದರೆ ಮಾಡೆಲ್ ಹತ್ಯೆ ಮಾಡುವುದಾಗಿ ರೋಹಿತ್ ಬೆದರಿಸಿದ್ದ.

ಆತನ ಮನವೊಲಿಸಲು ಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಅಲ್ಲದೆ ತನಗೆ ಆಹಾರ, ಸಿಗರೇಟ್ ಹಾಗೂ ಸ್ಟ್ಯಾಂಪ್ ಪೇಪರ್ ಬೇಕೆಂದು ಹೇಳಿ ತರಿಸಿಕೊಂಡಿದ್ದ. ಸ್ಟ್ಯಾಂಪ್ ಪೇಪರ್ ಮೇಲೆ ಮಾಡೆಲ್ ತನ್ನನ್ನು ಮದುವೆಯಾದಂತೆ ಕರಾರು ಬರೆಸಿಕೊಂಡಿದ್ದನೆನ್ನೆಲಾಗಿದ್ದು, ಅದನ್ನು ಒಪ್ಪಿ ಸಹಿ ಹಾಕಿದ ಬಳಿಕವೇ ಆಕೆಯನ್ನು ಬಿಡುಗಡೆಗೊಳಿಸಿದ್ದ.

ಬಿಡುಗಡೆಗೊಂಡ ಬಳಿಕ ಮಾಡೆಲ್, ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದ ಕಾರಣ ಆತ ಹೇಳಿದ್ದಕ್ಕೆಲ್ಲ ತಾನು ಒಪ್ಪಿ ಸಹಿ ಹಾಕಿರುವುದಾಗಿ ಹೇಳಿಕೆ ನೀಡಿರುವ ಕಾರಣ, ರೋಹಿತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...