alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವಂತಿದೆ ಎಟಿಎಂನಲ್ಲೇ ನಡೆದ ಈ ಘಟನೆ

atm jodh

ಜೋಧ್ ಪುರ: ಎಟಿಎಂನಲ್ಲಿ ಹಣ ಪಡೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹಣ ದೋಚಿದ ಘಟನೆ ರಾಜಸ್ತಾನದ ಜೋಧ್ ಪುರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನವೀನ್ ಬಂಧಿತ ಆರೋಪಿ. ಆತನಿಗೆ ಸಹಾಯ ಮಾಡಿದ್ದ ಅಪ್ರಾಪ್ತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಇವರಿಬ್ಬರು, ಹಣ ದೋಚಲು ಸಂಚು ರೂಪಿಸಿದ್ದಾರೆ. ಜೋಧ್ ಪುರದ ಮಂಡೋರ್ ನಲ್ಲಿರುವ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಹಣ ಪಡೆದುಕೊಳ್ಳಲು ಬಂದಿದ್ದು, ಅವರು ಎಲ್ಲಾ ಪ್ರಕ್ರಿಯೆ ಮುಗಿಸಿ ಹಣ ಪಡೆದುಕೊಳ್ಳುವವರೆಗೂ ನವೀನ್ ಕಾದಿದ್ದಾನೆ.

ಎಟಿಎಂ ಯಂತ್ರದಿಂದ ಅವರು ಹಣ ಪಡೆದುಕೊಳ್ಳುವಷ್ಟರಲ್ಲಿ ಅವರ ಮೇಲೆ ಎರಗಿದ್ದಾನೆ. ಅವರು ಪ್ರತಿರೋಧ ತೋರಿದಾಗ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು, ಇರಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ನವೀನ್ ಹಾಗೂ ಅಪ್ರಾಪ್ತನನ್ನು ಬಂಧಿಸಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...