alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಗಿರುವ ಮಗುವಿಗೆ ಅಲ್ಲಿ ಉಳಿಗಾಲವಿಲ್ಲ..!

tribes

ಅಂಡಮಾನ್ ಜರಾವಾ ಬುಡಕಟ್ಟಿನಲ್ಲೊಂದು ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಜನಾಂಗದಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೂ ಇಲ್ಲಿ ಬದುಕುವ ಅವಕಾಶವಿಲ್ಲ. ವಿಧವೆ ಅಥವಾ ಬೇರೆ ಜನಾಂಗದ ಪುರುಷನಿಂದ ಮಗು ಹುಟ್ಟಿದ್ದರೆ ಆ ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಲಾಗುತ್ತದೆ.

ಇಷ್ಟೇ ಅಲ್ಲ, ಹುಟ್ಟುವ ಮಗುವಿನ ಬಣ್ಣ ಕೂಡ ಪ್ರಾಮುಖ್ಯತೆ ಪಡೆಯುತ್ತದೆ. ಮಗು ಕಪ್ಪಗಿರದೆ, ಸ್ವಲ್ಪ ಬೆಳ್ಳಗಿದ್ದರೂ ಆ ಮಗುವನ್ನು ಕೊಲೆ ಮಾಡಲಾಗುತ್ತದೆ. ಮಗು ಬೆಳ್ಳಗಿದ್ದರೆ ಅದು ಬೇರೆ ಜನಾಂಗದ ಮಗುವಿನಂತೆ ಕಾಣುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಕೆಲ ತಿಂಗಳುಗಳಿಂದ ಮಕ್ಕಳ ಹತ್ಯೆ ಜಾಸ್ತಿಯಾಗ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾ ಇಲ್ಲ ಬುಡಕಟ್ಟು ಜನರ ಸಂಪ್ರದಾಯಕ್ಕೆ ಮಹತ್ವ ನೀಡಬೇಕಾ ಎಂಬ ಗೊಂದಲ ಪೊಲೀಸರನ್ನು ಕಾಡ್ತಾ ಇದೆ.

ಕಳೆದ ವರ್ಷದ ನವೆಂಬರ್ ನಲ್ಲಿ ಮಗುವೊಂದರ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆದ್ರೆ ಬುಡಕಟ್ಟು ಜನಾಂಗದವರು ಆರೋಪಿಗಳ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ. ದಾಖಲೆಗಳ ಪ್ರಕಾರ ಉತ್ತರ ಅಂಡಮಾನ್ ನಲ್ಲಿ 400 ಮಂದಿ ವಾಸವಾಗಿದ್ದಾರೆ. ಸುಮಾರು 55 ಸಾವಿರ ವರ್ಷಗಳ ಹಿನ್ನೆಲೆ ಇವರಿಗಿದೆ.1990 ರಲ್ಲಿ ಹೊರ ಪ್ರಪಂಚಕ್ಕೆ ಇವರ ಪರಿಚಯವಾಯ್ತು. ಆದ್ರೆ ಯಾವುದೇ ಬೇರೆ ಬುಡಕಟ್ಟು ಜನಾಂಗದವರನ್ನು ಇವರು ಒಳಗೆ ಬಿಟ್ಟುಕೊಳ್ಳುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...