alex Certify
ಕನ್ನಡ ದುನಿಯಾ       Mobile App
       

Kannada Duniya

ಉರುಳಿ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಯುವಕ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವೊಂದರ ಲೈವ್ ವಿಡಿಯೋ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮ ಕಡ್ಡಾಯವಾಗಿ ಅನುಸರಿಸಿ ಎಂಬುದನ್ನು ನೆನಪಿಸುವಂತಿದೆ.

ಯುವಕನೊಬ್ಬ ಮಿನಿ ಟ್ರಕ್ ಒಂದಕ್ಕೆ ನೇರವಾಗಿ ಗುದ್ದಿ 360 ಡಿಗ್ರಿ ತಿರುಗಿ ಬಿದ್ದ ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಚ್ಚರಿ ಎಂದರೆ ಆ ಯುವಕ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಬಚಾವ್ ಆಗಿದ್ದಾನೆಂದೂ ಹೇಳಬಹುದು.

ವೇಗವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಆ ಯುವಕ ಗಾಳಿಯಲ್ಲಿ ಒಂದು ಸುತ್ತು ಗಿರಕಿ ಹೊಡೆದಿದ್ದಾನೆ. ಜತೆಗೆ ತಕ್ಷಣವೇ ಎದ್ದು ತನ್ನನ್ನು ತಾನು ಸುಧಾರಿಸಿಕೊಂಡಿದ್ದಾನೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆತನ ವಾಹನವನ್ನು ಎತ್ತಿ ಸಹಾಯ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...