alex Certify
ಕನ್ನಡ ದುನಿಯಾ       Mobile App
       

Kannada Duniya

ಟೋಲ್ ಫೀ ಕೊಡಲು ನಿರಾಕರಿಸಿದ ಚಾಲಕ ಮಾಡಿದ್ದೇನು ಗೊತ್ತಾ..?

toll busಟೋಲ್ ಶುಲ್ಕ ನೀಡುವ ಕುರಿತಂತೆ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಟೋಲ್ ಶುಲ್ಕ ಕೇಳಿದ ವೇಳೆ ಈ ಚಾಲಕ ಮಾಡಿರುವ ಕೃತ್ಯ ಬೆಚ್ಚಿ ಬೀಳಿಸುವಂತಿದೆ.

ಗುರಂಗಾವ್ ನಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಲ್ಲಿನ ಖೇರ್ಕಿ ದೌಲಾ ಟೋಲ್ ಬಳಿ ಖಾಸಗಿ ಬಸ್ ಒಂದು ಬಂದಿದೆ. ಆಗ ಟೋಲ್ ಸಿಬ್ಬಂದಿ 60 ರೂ. ಶುಲ್ಕ ಕೊಡುವಂತೆ ಬಸ್ ಚಾಲಕನಿಗೆ ಹೇಳಿದ್ದಾನೆ. ಆದರೆ ಶುಲ್ಕ ಕೊಡಲು ನಿರಾಕರಿಸಿದ ಚಾಲಕ ಹಾಗೇ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ.

ಇದನ್ನು ಕಂಡ ಟೋಲ್ ಮ್ಯಾನೇಜರ್ ಸೇರಿದಂತೆ ಕೆಲ ಸಿಬ್ಬಂದಿ ಬಸ್ ತಡೆಯಲು ಮುಂದಾದ ವೇಳೆ ಅವರುಗಳ ಮೇಲೆಯೇ ಬಸ್ ಹರಿಸಲು ಚಾಲಕ ಯತ್ನಿಸಿದ್ದಾನೆ. ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ಟೋಲ್ ಮ್ಯಾನೇಜರ್, ಈ ಸಂಬಂಧ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...