alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಯುವತಿಯೆದುರೇ ಕಾಮುಕನಿಂದ ಹಸ್ತಮೈಥುನ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಸಾರ್ವಜನಿಕ ಬಸ್‌ ನಲ್ಲಿ ಯುವತಿಯ ಎದುರು ಕುಳಿತ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿದ್ದಾನೆ.

ವಿಪರ್ಯಾಸವೆಂದರೆ, ಬಸ್‌ನಲ್ಲಿದ್ದ ಯಾವೊಬ್ಬ ಪ್ರಯಾಣಿಕರೂ ಆ ಯುವತಿಯ ರಕ್ಷಣೆಗೆ ಬರಲಿಲ್ಲ.
ಆದರೂ ಬೆದರದ ಕಾಲೇಜು ವಿದ್ಯಾರ್ಥಿನಿಯಾದ ಆ ಸಂತ್ರಸ್ತ ಯುವತಿ ತಾನೇ ಯುವಕನಿಗೆ ಬಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.

ದಕ್ಷಿಣ ದೆಹಲಿಯ ಕಪಶೇಡದಿಂದ ವಸಂತ್ ಕುಂಜ್ ಮಾರ್ಗದ ಬಸ್‌ನಲ್ಲಿ ಈ ಕುಕೃತ್ಯ ನಡೆದಿದೆ. ಮಹಿಳೆಯರ ಸೀಟ್‌ನಲ್ಲಿ ತಾನು ಕುಳಿತಿದ್ದೆ. ಆ ವಿಕೃತ ಕಾಮಿ ನನ್ನ ಎದುರು ಕುಳಿತು ಹಸ್ತ ಮೈಥುನ ಮಾಡಿಕೊಂಡ. ತಕ್ಷಣವೇ ನಾನು ಕಿರುಚಿದೆ. ಆದರೆ ಯಾರೂ ನೆರವಿಗೆ ಬರಲಿಲ್ಲ. ಕೊನೆಗೆ ನಾನೇ ಧೈರ್ಯ ಮಾಡಿ ಆತನಿಗೆ ಎರಡೇಟು ಬಾರಿಸಿ ಬಸ್ಸಿನಿಂದ ಹೊರಕ್ಕೆಳೆದು ಪೊಲೀಸರಿಗೆ ಒಪ್ಪಿಸಿದೆ ಎಂದು ಆ ಯುವತಿ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...