alex Certify
ಕನ್ನಡ ದುನಿಯಾ       Mobile App
       

Kannada Duniya

ಆನೆ ಸಫಾರಿ ಕುರಿತು ಬಹಿರಂಗವಾಗಿದೆ ಶಾಕಿಂಗ್ ಮಾಹಿತಿ

ರಾಜಸ್ಥಾನದಲ್ಲಿ ಕುರುಡ ಹಾಗೂ ಆರೋಗ್ಯ ಸಮಸ್ಯೆಯಿರುವ ಆನೆಗಳನ್ನು ಸಫಾರಿಗೆಂದು ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

ರಾಜಸ್ಥಾನದ ಪ್ರಸಿದ್ಧ ಅಮೇರ್ ಕೋಟೆ, ಗುಡ್ಡದ ಮೇಲಿನ ಸುಂದರ ಪ್ರದೇಶಲ್ಲಿದ್ದು, ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಆನೆ ಸವಾರಿಯೂ ಬಹಳ ಫೇಮಸ್. ಆದರೆ 10ಕ್ಕೂ ಹೆಚ್ಚು ಕುರುಡು ಆನೆಗಳು ಅಥವಾ ಮಂದ ದೃಷ್ಠಿಯುಳ್ಳ ಆನೆಗಳನ್ನು ಸಫಾರಿಗೆಂದು ಬಳಸಲಾಗುತ್ತಿದೆ ಎಂಬ ಬಗ್ಗೆ ಭಾರತ ಸರ್ಕಾರದ ಎನಿಮಲ್ ವೆಲ್ಫೇರ್ ಬೋರ್ಡ್ ತಿಳಿಸಿದೆ. ಪೇಟಾ ಹಾಗೂ ಸರ್ಕಾರಿ ಅಧಿಕಾರಿಗಳು ಇಲ್ಲಿನ ಆನೆಗಳ ಆರೋಗ್ಯ ಪರಿಶೀಲಿಸಿದ್ದು, ಅದರಲ್ಲಿ ಸುಮಾರು 102 ಆನೆಗಳಿಗೆ ಆರೋಗ್ಯ ಸಮಸ್ಯೆಯಿದೆ ಎಂದು ತಿಳಿಸಿದ್ದಾರೆ.

ಸರ್ಕಾರದೊಂದಿಗೆ ರಿಜಿಸ್ಟರ್ ಮಾಡಿಸಿಕೊಂಡು ಖಾಸಗಿ ಮಾಲೀಕತ್ವದಲ್ಲಿ ಇಂಥ ಆನೆ ಸಫಾರಿಗಳು ನಡೆಯುತ್ತವೆ. ಆದರೆ ಕುರುಡಾದ, ಖಾಯಿಲೆಗಳಿಗೆ ಒಳಗಾದಂತಹ ಆನೆಗಳನ್ನೇ ಅಕ್ರಮವಾಗಿ ಜನರ ಸವಾರಿಗೆ ಬಳಸಿಕೊಳ್ಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...