alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ಮಕ್ಕಳನ್ನು ವ್ಯಾನ್ ನಲ್ಲಿ ಬಿಟ್ಟು ಕುಡಿಯಲು ಹೋದ ಚಾಲಕ

ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನ ಸುರಕ್ಷಿತವೆಂದು ಪಾಲಕರು ಭಾವಿಸ್ತಾರೆ. ತಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೆಂಬ ಭರವಸೆಯಲ್ಲಿರ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನ ಚಾಲಕರನ್ನು ನಂಬುವುದು ಕಷ್ಟವಾಗಿದೆ. ಮಕ್ಕಳನ್ನು ಆಪತ್ತಿಗೆ ತಳ್ಳುವ ಘಟನೆಗಳು ಬೆಳಕಿಗೆ ಬರ್ತಿವೆ. ಲಕ್ನೋದಲ್ಲಿ ಪಾಲಕರು ಆತಂಕಗೊಳ್ಳುವ ಘಟನೆ ನಡೆದಿದೆ.

ಲಕ್ನೋದಲ್ಲಿ ಶಾಲೆ ಮಕ್ಕಳನ್ನು ತುಂಬಿದ್ದ ವ್ಯಾನ್ ಒಂದರ ಚಾಲಕ, ಮಕ್ಕಳನ್ನು ವಾಹನದಲ್ಲಿಯೇ ಬಿಟ್ಟು ಸಾರಾಯಿ ಅಂಗಡಿಗೆ ಹೋಗಿದ್ದಾನೆ. ವಾಹನ ನ್ಯೂಟ್ರಲ್ ನಲ್ಲಿತ್ತು. ಇದನ್ನು ನೋಡಿದ ದಾರಿಹೋಕನೊಬ್ಬ ಮಕ್ಕಳನ್ನು ಚಾಲಕನೆಲ್ಲಿ ಎಂದು ಕೇಳಿದ್ದಾನೆ. ಮಕ್ಕಳು ಎಲ್ಲಿಗೋ ಹೋದ್ರು ಎಂದು ಉತ್ತರ ನೀಡಿದ್ದಾರೆ. ಇದನ್ನು ವಿಡಿಯೋ ಮಾಡಿದ ವ್ಯಕ್ತಿ ಹತ್ತಿರದಲ್ಲಿದ್ದ ಸಾರಾಯಿ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ವ್ಯಾನ್ ಚಾಲಕ ಸಿಕ್ಕಿದ್ದಾನೆ.

ವಾಹನ ಚಾಲಕನಿಗೆ ಪ್ರಶ್ನೆ ಮಾಡ್ತಿದ್ದಂತೆ ಅಲ್ಲಿಂದ ಚಾಲಕ ಕಾಲ್ಕಿತ್ತಿದ್ದಾನೆ. ಘಟನೆ ಆಗಸ್ಟ್ ತಿಂಗಳಿನಲ್ಲಿ ನಡೆದಿದೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...